ಕಾರ್ಮಿಕರ ಆರೋಪ ಸುಳ್ಳು: ಎನ್ಎಂಪಿಟಿ ಸ್ಪಷ್ಟನೆ
ಮಂಗಳೂರು: ನವಮಂಗಳೂರು ಬಂದರಿನಲ್ಲಿ (ಎನ್ಎಂಪಿಟಿ) ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ತಾಂತ್ರಿಕ ಹಾಜರಾತಿ ವ್ಯವಸ್ಥೆ ಕಲ್ಪಿಸಿಲಾಗಿದ್ದು, ಇದನ್ನು ವಿರೋಧಿಸಿ 3ನೇ ಮತ್ತು 5ನೇ ವಿಭಾಗದ ಯೂನಿಯನ್ ಕಾರ್ಮಿಕರು ಸುಳ್ಳು ಆರೋಪ ಹೊರಿಸಿ, ಮಿಂಚಿನ ಪ್ರತಿಭಟನೆ ನಡೆಸಿದ್ದಾರೆ ಎಂದು ಎನ್ಎಂಪಿಟಿ ಆರೋಪಿಸಿದೆ. ಫೆ. 7 ರಂದು ಸಂಸ್ಥೆಯು ತಾಂತ್ರಿಕ ಹಾಜರಾತಿ ವ್ಯವಸ್ಥೆಯ ಬಗ್ಗೆ ಕಾರ್ಮಿಕರಿಗೆ ತಿಳಿಸಿದ್ದು, ಫೆ. 8ಕ್ಕೆ ನೌಕರರ ಹೆಬ್ಬೆರಳಿನ ಗುರುತನ್ನು ಮುದ್ರಿಸಿ ಕೆಲಸಕ್ಕೆ ಹಾಜರಾಗುವಂತೆ ಆದೇಶಿಸಲಾಗಿತ್ತು. ಇದನ್ನು ವಿರೋಧಿಸಿರುವ ಯೂನಿಯನ್ ವಿನಾಕಾರಣ ಸಂಸ್ಥೆಯ ಮುಖ್ಯ ಮೆಕಾನಿಕಲ್ ಎಂಜಿನಿಯರ್ ಮೇಲೆ ಜಾತಿ ನಿಂದನೆ ಆರೋಪ ಹೊರಿಸಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸ್ಪಷ್ಟನೆ ನೀಡಿದ್ದಾರೆ.