ಕಾಳಾವರ: ಯುವಕ ಆತ್ಮಹತ್ಯೆ
ಕುಂದಾಪುರ: ಇಲ್ಲಿನ ಕಾಳಾವರ ಗ್ರಾಮದ ಕಮಲಶಿಲೆ ಎಂಬಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರು ಮಂಜುನಾಥ. ಈತ ಫೆ. 14ರಂದು ಮಧ್ಯಾಹ್ನ 4 ಗಂಟೆಗೆ ಕುಂದಾಪುರಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ವಾಪಾಸ್ ಮನೆಗೆ ಬಾರದೇ ಕಾಣೆಯಾಗಿದ್ದರು. ಈ ಬಗ್ಗೆ ಸಂಬಂಧಿಕರ ಮನೆಯಲ್ಲಿ ಹುಡುಕಿದರೂ ಪತ್ತೆಯಾಗಿರಲಿಲ್ಲ. ಫೆ. 16ರಂದು ಸ್ಥಳೀಯ ದೇವಾಡಿಗ ಎಂಬವರ ಮನೆಯ ಪಕ್ಕದ ಹಾಡಿಯಲ್ಲಿ ಮಂಜುನಾಥ ಅವರ ಶವ ಪತ್ತೆಯಾಗಿದೆ. ಆತ ಯಾವುದೋ ವಿಷ ಪದಾರ್ಥ ಸೇವಿಸಿ ಮಂಜುನಾಥ ಮೃತಪಟ್ಟಿದ್ದಾರೆ. ಈ ಬಗ್ಗೆ ನರಸಿಂಹ ದೇವಾಡಿಗ ಎಂಬವರು ನೀಡಿದ ದೂರಿನಂತೆ ಕುಂದಾಫುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.