ಮರವಂತೆ: ಯುವಕ ನಾಪತ್ತೆ
ಗಂಗೊಳ್ಳಿ: ಇಲ್ಲಿನ ಮರವಂತೆ ಗ್ರಾಮದಲ್ಲಿ ಬಡಗಿ ವೃತ್ತಿ ಮಾಡಿಕೊಂಡಿದ್ದ ಯುವಕನೊಬ್ಬ ಕಾಣೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾಣೆಯಾದವರು ಷಣ್ಮುಖ (23), ಈತ ಕನ್ಯಾನದ ನಮ್ಮ ಭೂಮಿಯಲ್ಲಿ ಮರದ ಕೆಲಸದ ತರಬೇತಿ ಪಡೆದಿದ್ದು, ಮಧುಕರ್ ಆಚಾರ್ ಎಂಬವರಲ್ಲಿ ಕಳೆದ 3 ವರ್ಷಗಳಿಂದ ಕೆಲಸ ಮಾಡುತ್ತಿದ್ದು ಅವರ ಮನೆಯಲ್ಲಿ ವಾಸವಾಗಿದ್ದ. ಅನಾಥನಾಗಿರುವ ಆತನ ಪೂರ್ವಾಪರಗಳು ಯಾರಿಗೂ ತಿಳಿದಿಲ್ಲ. ಈತ ಫೆ. 6ರಂದು ಮಧ್ಯಾಹ್ನ ಮನೆಯಿಂದ ಹೋದವನು ವಾಪಾಸ್ ಬಂದಿಲ್ಲ. ಈ ಬಗ್ಗೆ ಮಧುಕರ್ ಆಚಾರ್ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.