'ಆರೋಗ್ಯ ಅರಿವು' ಯಕ್ಷಗಾನ ಪ್ರದರ್ಶನ ಉದ್ಘಾಟನೆ
ಉಡುಪಿ: ಭಾರತ ಸರ್ಕಾರ ಗೀತೆ ಮತ್ತು ನಾಟಕ ವಿಭಾಗ, ಉಡುಪಿ ನೆಹರು ಯುವ ಕೇಂದ್ರ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ವತಿಯಿಂದ ಬೆಂಗಳೂರು ಯಕ್ಷದೇಗುಲ ತಂಡದವರಿಂದ 28ರವರೆಗೆ ನಡೆಯಲಿರುವ ಆರೋಗ್ಯ ಅರಿವು ಯಕ್ಷಗಾನ ಪ್ರದರ್ಶನವನ್ನು ಸೋಮವಾರ ಖಾರ್ವಿಕೆರೆ ಮಹಾಕಾಳಿ ದೇವಸ್ಥಾನ ವಠಾರದಲ್ಲಿ ಡಾ. ಪ್ರಕಾಶ್ ತೋಳಾರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸರ್ಕಾರದ ಯೋಜನೆ ಯೋಚನೆಗಳನ್ನು ಯಕ್ಷಗಾನದ ಮೂಲಕ ಪ್ರಸ್ತುತ ಪಡಿಸಿದಾಗ ಗ್ರಾಮೀಣ ಭಾಗದ ಸಾಮಾನ್ಯ ಜನರಿಗೂ ಮನ ಮುಟ್ಟುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ಕಲೆಯು ಕೇವಲ ಮನೋರಂಜನೆಗೆ ಸೀಮಿತವಾಗಿರದೆ ಜನರಿಗೆ ಅರಿವು ಮೂಡಿಸುವ ಮಾಧ್ಯಮವಾಗಬೇಕು ಎಂದು ಹೇಳಿದರು.
ಸಹಾಯಕ ಅಂಚೆ ಅಧೀಕ್ಷಕ ಜಯರಾಮ ಶೆಟ್ಟಿ ಮಾತನಾಡಿದರು.
ನೆಹರು ಯುವ ಕೇಂದ್ರದ ನರಸಿಂಹ ಗಾಣಿಗ, ಯಕ್ಷದೇಗುಲದ ವ್ಯವಸ್ಥಾಪಕ ಸುದರ್ಶನ ಉರಾಳ, ವಕೀಲ ರಾಘವೇಂದ್ರ ನಾವುಡ, ಮೈಲಾರೇಶ್ವರ ಯುವಕ ಮಂಡಲದ ಅಧ್ಯಕ್ಷ ಗಣೇಶ, ಸಿಟಿ ಜೇಸಿಐಯ ಜಯಚಂದ್ರ ಶೆಟ್ಟಿ, ದೇವಸ್ಥಾನದ ಕೋಶಾಧಿಕಾರಿ ಗಣಪತಿ ಖಾರ್ವಿ, ಭಾಗವತ ಲಂಬೋದರ ಹೆಗ್ಡೆ, ಮಹಿಳಾ ಮಂಡಳಿಯ ಅಧ್ಯಕ್ಷೆ ಗೀತಾ ಸಾರಂಗ ಇದ್ದರು.
ಕಾರ್ಯಕ್ರಮವನ್ನು ಶಶಿಕಲಾ ಮೋಹನ್ ನಿರ್ವಹಿಸಿದರು. ವಸಂತಿ ಸಾರಂಗ ಸ್ವಾಗತಿಸಿದರು. ಜೆಸಿಐಯ ಜಯಚಂದ್ರ ಶೆಟ್ಟಿ ವಂದಿಸಿದರು.
ನಂತರ ಯಕ್ಷ ದೇಗುಲದ ನುರಿತ ಕಲಾವಿದರಿಂದ 'ಆರೋಗ್ಯ ಅರಿವು' ಯಕ್ಷಗಾನ ಪ್ರದರ್ಶನ ನಡೆಯಿತು. ಕಲಾವಿದರಾಗಿ ಸುದರ್ಶನ ಉರಾಳ, ಲಂಬೋದರ ಹೆಗ್ಡೆ, ದೇವರಾಜದಾಸ್, ಭಾಸ್ಕರ ಭಂಡಾರಿ, ಮಾಧವ ಮಣೂರು, ಗಣೇಶ ಉಪ್ಪುಂದ, ತಮ್ಮಣ್ಣ ಗಾಂವ್ಕರ್, ಗಣಪತಿ ಹೆಗ್ಡೆ, ನರಸಿಂಹ ತುಂಗ, ವಿಶ್ವನಾಥ ಶೆಟ್ಟಿ, ಉದಯ ಬೋವಿ ಭಾವಹಿಸಿದ್ದರು.