ನಿವೃತ್ತ ಶಿಕ್ಷಕರಿಗೆ ಸನ್ಮಾನ
ಉಡುಪಿ: ಶಿರ್ವ ಸಮೀಪದ ಸೂಡ ಪಡುಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ ಶಾಲಾ ಮುಖ್ಯ ಶಿಕ್ಷಕಿ ಲೇನಿ ಪೌಲಿನ್ ಡಿ' ಮೆಲ್ಲೊ, ಶಿಕ್ಷಕ ನಾರಾಯಣ ರಾವ್ ಮತ್ತು ಅಂಗನವಾಡಿ ಶಿಕ್ಷಕಿ ಸುಶೀಲಾ ಅವರನ್ನು ಶಿಕ್ಷಣ ಸಂಯೋಜಕಿ ಶೈಲಜಾ ಹೆಗ್ಡೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬಿ.ಆರ್.ಪಿ. ಜಯಂತಿ ಶೆಟ್ಟಿ, ಸಿ.ಆರ್.ಪಿ. ಪಾಂಡುರಂಗ ಶೆಟ್ಟಿ, ಎಸ್ಡಿಎಂಸಿ ಅಧ್ಯಕ್ಷೆ ಪ್ರೇಮಲತಾ ಇದ್ದರು.
ರಾಷ್ಟ್ರೀಯ ಮಟ್ಟದ ಸ್ಪರ್ಧೆ: ಕುತ್ಪಾಡಿ ಕಾಲೇಜ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ
ಉಡುಪಿ: ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚೆಗೆ ಪುಣೆಯ ಆಯುರ್ವೇದ ಶಿಕ್ಷಣ ಮಂಡಳಿಯ ವತಿಯಿಂದ ಮತ್ತು ತಿಲಕ್ ಆಯುರ್ವೇದ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ಪ್ರಬಂಧ ಸ್ಪರ್ಧೆಯಲ್ಲಿ ಡಾ. ಶರದ್ ಕುಲಕರ್ಣಿ (ಕಿರು ವೈದ್ಯ) ಎರಡನೇ ಸ್ಥಾನ ಹಾಗೂ ಡಾ. ನಿತಿನ್ (ಕಿರುವೈದ್ಯ) ಮತ್ತು ನಂದೀಶ್ ಜೆ. (2ನೇ ಬಿ.ಎ.ಎಮ್.ಎಸ್.) ಇವರು ತೃತೀಯ ಸ್ಥಾನವನ್ನೂ, ಭಾಷಣ ಸ್ಪರ್ಧೆಯಲ್ಲಿ ಡಾ. ಸಹನಾ ಶಂಕರಿ (ಸ್ನಾತಕೋತ್ತರ) ಮೊದಲನೇ ಸ್ಥಾನ ಹಾಗೂ ಕುಮಾರಿ ಮೇಘಾ ನಾಯಕ್ (2ನೇ ಬಿ.ಎ.ಎಮ್.ಎಸ್) ಮತ್ತು ಡಾ. ರೇಶ್ಮಾ ಪೈ (ಕಿರುವೈದ್ಯ) ಇವರು ಎರಡನೇ ಸ್ಥಾನವನ್ನೂ ಹಾಗೂ ವಿಷಯ ಮಂಡಣೆ ಸ್ಪರ್ಧೆಯಲ್ಲಿ ಕುಮಾರಿ ಮೇಘಾ ನಾಯಕ್ (2ನೇ ಬಿ.ಎ.ಎಮ್.ಎಸ್) ಮೊದಲ ಸ್ಥಾನವನ್ನೂ ಮತ್ತು ಭಿತ್ತಿ ಚಿತ್ರ ತಯಾರಿಕೆ ಸ್ಪರ್ಧೆಯಲ್ಲಿ ಡಾ. ಸಹನಾ ಶಂಕರಿ (ಸ್ನಾತಕೋತ್ತರ) ತೃತೀಯ ಸ್ಥಾನವನ್ನೂ ಪಡೆದುಕೊಂಡಿರುತ್ತಾರೆ.