ವಾರ್ಷಿಕೋತ್ಸವ
ಕುಂದಾಪುರ: ಇಲ್ಲಿನ ಬೀಜಾಡಿ ಗ್ರಾಮದ ಗೋಪಾಡಿಯ ಚಂದನ ಯುವಕ ಮಂಡಲದ 9ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಇತ್ತೀಚೆಗೆ ಮೂಡುಗೋಪಾಡಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರುಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರೇಮಾನಂದ ಕಟ್ಕೇರಿ ವಹಿಸಿದ್ದರು. ಉದ್ಯಮಿ ಪ್ರಭಾಕರ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಜಾಹ್ನವಿ ನಜರತ್, ಪ್ರಾಯೋಜಕರಾದ ಬಿ.ಎಂ. ಹಂಝಾ, ಕುಂದಾಪುರ ಜನಜಾಗೃತಿ ವೇದಿಕೆ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹಾಗೂ ಯುವಕ ಮಂಡಲದ ಅಧ್ಯಕ್ಷ ಗೋಪಿರಾಜ್ ಮೊದಲಾದವರು ಇದ್ದರು. ಈ ಸಂದರ್ಭದಲ್ಲಿ ಸ್ಥಳೀಯ ವೈದ್ಯ ಅಶೋಕ ಕುಮಾರ್ ಶೆಟ್ಟಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಅವರನ್ನು ಗೌರವಿಸಲಾಯಿತು. ಸಂಘದ ಸದಸ್ಯರಾದ ರವಿ ಕಟ್ಕೇರಿ ನಿರೂಪಿಸಿ, ಮಂಜುನಾಥ ಆಚಾರ್ ವಂದಿಸಿದರು.