2ನೇ ದಿನ ಬಂದ್‌ಗೆ ನೀರಸ ಪತ್ರಿಕ್ರಿಯೆ
ಉಡುಪಿ: ಬೆಲೆಯೇರಿಕೆ ನಿಯಂತ್ರಣ, ಗುತ್ತಿಗೆ ಕಾರ್ಮಿಕ ಪದ್ಧತಿಯ ರದ್ದತಿ ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ 48 ಗಂಟೆಗಳ ಬಂದ್‌ಗೆ 2ನೇ ದಿನ ಗುರುವಾರ ಜಿಲ್ಲಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೊದಲ ದಿನ ಬುಧವಾರ ಜಿಲ್ಲಾದ್ಯಂತ ಅತ್ಯಂತ ಶಾಂತಯುತವಾಗಿ ಬಂದ್ ಬಹುತೇಕ ಯಶಸ್ವಿಯಾಗಿತ್ತು. ಕಾರ್ಮಿಕ ಸಂಘಟನೆಗಳ ಕರೆಗಿಂತಲೂ ಮುಖ್ಯವಾಗಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಬಂದ್ ಪರಿಣಾಮಕಾರಿಯಾಗಿತ್ತು. ಆದರೆ ಗುರುವಾರ ಮುಂಜಾನೆಯಿಂದಲೇ ಬಸ್ ಸಂಚಾರ ಪುನಾರಂಭವಾಗುತ್ತಿದ್ದಂತೆ ಬಂದ್ ರದ್ದಾಗಿ ಜನಜೀವನ ಮತ್ತೆ ಹಳಿಗೆ ಬಂತು, ಬುಧವಾರ ಅನಿವಾರ್ಯವಾಗಿ ರಜೆ ಘೋಷಿಸಿದ್ದ ಶಾಲಾ ಕಾಲೇಜುಗಳು ಗುರುವಾರ ಎಂದಿನಂತೆ ನಡೆದವು. ಖಾಸಗಿ ಉದ್ಯಮಗಳು- ಕಚೇರಿಗಳು ಎಂದಿನಂತೆ ಕಾರ್ಯಾಚರಿಸಿದವು, ಅಂಗಡಿ- ಹೋಟೇಲ್‌ಗಳು ತೆರೆದಿದ್ದವು. ಆದರೆ ಈ ಬಂದ್‌ಗೆ ಕರೆ ನೀಡಿದ್ದ ಕಾರ್ಮಿಕ ಸಂಘಟನೆಗಳ ಸದಸ್ಯರಾಗಿರುವ ಕಾರ್ಮಿರಿರುವ ಬ್ಯಾಂಕು, ಅಂಚೆ ಇಲಾಖೆ, ಜೀವವಿಮಾ ನಿಗಮ ಇತ್ಯಾದಿ ಕಚೇರಿಗಳು ಗುರುವಾರವೂ ಬಾಧಿತಗೊಂಡವು. ಇದರಿಂದ ಸತತ 2ನೇ ದಿನವು ಸಾರ್ನಜನಿಕ ಆರ್ಥಿಕ ವ್ಯವಹಾರಗಳ ಮೇಲೆ ಪರಿಣಾಮಗಳಾದವು.
ಉಡುಪಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಗುರುವಾರ ಸಿಟಿ ಬಸ್ಸುಗಳ ಓಡಾಟ ಎಂದಿನಂತೆ ನಡೆಯಿತು. ಆದರೆ ಸರ್ವೀಸ್ ಬಸ್‌ಗಳ ಓಡಾಟಕ್ಕೆ ಕೆಲವು ಕಡೆಗಳಲ್ಲಿ ಕಾರ್ಮಿಕ ಸಂಘಟನೆಗಳು ಅಡ್ಡಿಪಡಿಸಿದವು. ಮುಖ್ಯವಾಗಿ ಕುಂದಾಪುರದಲ್ಲಿ ಬೆಳಗ್ಗೆ ಬಸ್ ಸಂಚಾರ ಇರಲಿಲ್ಲ, ಉಡುಪಿಯಿಂದ ಮಂಗಳೂರಿಗೆ ಬಸ್‌ಗಳು ಸಂಚರಿಸಲಿಲ್ಲ. ಆದರೆ ಮಧ್ಯಾಹ್ನ ನಂತರ ಬಸ್ ಸಂಚಾರ ಆರಂಭವಾಯಿತು. ಮಣಿಪಾಲದಲ್ಲಿ ಬಂದ್ ಅಂತಹ ಪ್ರಭಾವ ಬೀರಿರಲಿಲ್ಲ. ಕಾರ್ಕಳದಲ್ಲಿ ಬಂದ್‌ಗೆ ಗುರುವಾರ ಅಂತಹ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅಂಗಡಿ ಮುಂಗಟ್ಟುಗಳು ಎಂದಿನಂತೆ ವ್ಯವಹಾರ ನಡೆಸಿದವು. ಬಸ್ ಸಂಚಾವರೂ ಅಬಾಧಿತವಾಗಿತ್ತು.