ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಅನಾಚಾರ, ಅಕ್ರಮಗಳಿಗೆ ಇಸ್ಲಾಂ ಧರ್ಮದಲ್ಲಿ ಅವಕಾಶ ಇಲ್ಲ: ಅಹ್ಮದ್ ಶರೀಫ್

Lingaraj Badiger
Updated On : 22 Feb 2013, 12:02 pm

ಉಡುಪಿ: ಮತ್ತೊಬ್ಬರ ಮುಖದಲ್ಲಿ ಸಂತೋಷ ಕಾಣುವ ಉದಾತ್ತ ವಿಚಾರಗಳು ಪ್ರವಾದಿ ಮಹಮ್ಮದರ ಸಂದೇಶದಲ್ಲಿ ಅಡಕವಾಗಿದೆ ಎಂದು ಮಿತ್ತೂರು ಮುದ್ರರಿಸ್ ದಅವಾ ಕಾಲೇಜಿನ ಅಹ್ಮದ್ ಶರೀಫ್ ಸಅದಿ ಅಲ್ ಕಾಮಿಲ್ ನಲ್ಲೂರು ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಶಿರ್ವ ಸಾರ್ವಜನಿಕ ಶ್ರೀಗಣೇಶೋತ್ಸವ ವೇದಿಕೆ ಸಮೀಪ ಕರ್ನಾಟಕ ರಾಜ್ಯ ಸುನ್ನಿ ಸ್ಟೂಡಂಟ್ ಫೆಡರೇಶನ್ ಕಾಪು ವಲಯ ಸಮಿತಿ ವತಿಯಿಂದ ಏರ್ಪಡಿಸಿದ 'ವಿಶ್ವಪ್ರವಾದಿ ಮಹಮ್ಮದ್ ಪೈಗಂಬರ್‌' ಜನ್ಮ ಮಾಸಾಚರಣೆ ಪ್ರಯುಕ್ತ ಏರ್ಪಡಿಸಿದ ಮಿಲಾದ್ ಸಂದೇಶ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಸಂದೇಶ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಿರ್ವ ಹಿಂದೂ ಪಪೂ ಕಾಲೇಜಿನ ನಿವೃತ್ತ ಪ್ರಾಂಶಪಾಲ ಎಸ್.ವಿ.ಗಣಪತಿ ಭಟ್ ಮಾತನಾಡಿದರು.
ಪತ್ರಕರ್ತ ಬಿ.ಪುಂಡಲೀಕ ಮರಾಠೆ ಮಾತನಾಡಿದರು.  ಶಿರ್ವ ಸುನ್ನಿ ಜಾಮಿ ಮಸೀದಿ ಮಾಜಿ ಅಧ್ಯಕ್ಷ ಎಸ್. ಇಸ್ಮಾಯಿಲ್ ಅಬ್ದುರ್ರಹ್ಮನ್ ಅಧ್ಯಕ್ಷತೆ ವಹಿಸಿದ್ದರು.
ಎಸ್.ಎಸ್.ಎಫ್. ಕಾಪು ವಲಯಾಧ್ಯಕ್ಷ ಅಲ್ಹಾಜ್ ನಝೀರ್ ಅಹ್ಮದ್ ಸಅದಿ ಸ್ವಾಗತಿಸಿದರು. ಕೈರುಲ್ಲಾ ತೋಪನಂಗಡಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement