ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಬೇಸಗೆ ಶಿಬಿರ ಏರ್ಪಡಿಸಿ: ಗೌರಿ ಪೂಜಾರಿ

Lingaraj Badiger
Updated On : 22 Feb 2013, 12:02 pm

ಪಡುಬಿದ್ರಿ: ದೇವಸ್ಥಾನಗಳಲ್ಲಿ ಧಾರ್ಮಿಕ ಚಟುವಟಿಕೆಗಳ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಎಂದು ಉಡುಪಿ ತಾಲೂಕು ಪಂಚಾಯಿತಿ ಅಧ್ಯಕೆ ಗೌರಿ ಪೂಜಾರಿ ಹೇಳಿದರು.
ಎರ್ಮಾಳು ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದಲ್ಲಿ ಶ್ರೀ ಆದಿಶಕ್ತಿ ವೀರಭದ್ರ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಇತ್ತೀಚೆಗೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವಸ್ಥಾನಗಳಲ್ಲಿ ಭಜನೆ, ಹರಿಕಥೆ, ಮಕ್ಕಳಿಗಾಗಿ ಬೇಸಗೆ ಶಿಬಿರಗಳನ್ನು ಏರ್ಪಡಿಸಬೇಕು. ಆ ಮೂಲಕ ಮಕ್ಕಳಲ್ಲಿ ಧಾರ್ಮಿಕ ಮನೋಭಾವನೆ ಬೆಳೆಸಬೇಕು. ದೇವಸ್ಥಾನಗಳಲ್ಲಿ ಹಣದ ಕೊರತೆ ಇಲ್ಲ ಆದರೆ ಭಕ್ತರ ಕೊರತೆ ಇದೆ ಎಂದರು.
ಹಿಂದೆ ಮನೆಗಳಲ್ಲಿ ಭಜನೆ ನಡೆಯುತ್ತಿತ್ತು ಆದರೆ ಇಂದು ಟಿವಿ ಮಾಧ್ಯಮದ ಪ್ರಭಾವದಿಂದ ಅದು ಮಾಯವಾಗುತ್ತಿದೆ. ಅದಕ್ಕಾಗಿ ಹಿರಿಯರು ಮಕ್ಕಳಲ್ಲಿ ಭಜನೆ ಬಗ್ಗೆ ಆಸಕ್ತಿ ಮೂಡಿಸಬೇಕು. ದೇವಸ್ಥಾನಗಳು ಜೀರ್ಣೋದ್ಧಾರಗೊಂಡರೆ ಸಾಲದು ಭಕ್ತರು ಪಾಲ್ಗೊಳ್ಳುವ ಮೂಲಕ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದರು.
ಮಾನ ಕಾಪಾಡಲು ವಸ್ತ್ರ ನೀಡುವ ಮೂಲಕ ಪದ್ಮಶಾಲಿ ಸಮಾಜ ಜನರಲ್ಲಿ ನಾಗರಿಕತೆಯನ್ನು ಬೆಳೆಸಿದೆ ಎಂದು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ ಹೇಳಿದರು.
ಎರ್ಮಾಳು ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೋಸರ ಅಶೋಕರಾಜ ಅಧ್ಯಕ್ಷತೆವಹಿಸಿದ್ದರು. ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಎರ್ಮಾಳು ಗ್ರಾಪಂ ಅಧ್ಯಕ್ಷೆ ಜಯಶ್ರೀ, ಹೋಟೆಲ್ ಉದ್ಯಮಿ ರಮೇಶ್ ಭಟ್, ಕೆ. ಉದಯ ಶೆಟ್ಟಿ, ಎರ್ಮಾಳು ಬಂಟರ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ವೆಂಕಟೇಶ ಕಾವೂರು, ಎರ್ಮಾಳು ಮೊಗವೀರ ಸಭಾದ ಅಧ್ಯಕ್ಷ ಶ್ರೀಧರ ಬಂಗೇರ, ಎರ್ಮಾಳು ಪೇಟೆ ಮನೆ ಮೋಹನದಾಸ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪಿ.ವಿ. ಶೆಟ್ಟಿಗಾರ್ ಉಪಸ್ಥಿತರಿದ್ದರು.
ಮುಂಬೈ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್ ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ನಿರೂಪಿಸಿದರು.
ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದಿಂದ ಆದಿಶಕ್ತಿ ದೇವಿಯ ಶಿಲಾಬಿಂಬ, ವೀರಭದ್ರ ದೇವರ ಬಲಿ ಬಂಬ ಹಾಗೂ ದೈವದ ಮುಖವಾಡಗಳು ಮತ್ತು ಹಸಿರು ಹೊರೆಕಾಣಿಕೆಯನ್ನು ವೈಭವದ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement