ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಅಗ್ನಿ ಅನಾಹುತ: ಓಮ್ನಿ ಭಸ್ಮ, 2 ಹಸು ಸಾವು

Mainashree
Updated On : 24 Feb 2013, 11:16 am

ಕುಂದಾಪುರ: ಇಲ್ಲಿನ ತೆಕ್ಕಟ್ಟೆ ಸಮೀಪದ ಕೆದೂರಿನ ಮೂಡುಕೆದೂರು ಎಂಬಲ್ಲಿ ಶನಿವಾರ ಸಂಜೆ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಓಮ್ನಿ ಕಾರು ಸಂಪೂರ್ಣ ಭಸ್ಮಗೊಂಡಿದ್ದು, ಫ್ರಿಜ್ ಹಾಗೂ  ಕೊಟ್ಟಿಗೆಯಲ್ಲಿ ದಾಸ್ತಾನು ಮಾಡಲಾಗಿದ್ದ ಹುಲ್ಲು ಸುಟ್ಟು ಹೋಗಿದ್ದು, ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 2 ಹಸುಗಳು ಸಾವನ್ನಪ್ಪಿದ ಘಟನೆ ಸಂಭವಿಸಿದೆ.
 ಶನಿವಾರ ಸಂಜೆ ಸುಮಾರು 5 ಗಂಟೆ ಸುಮಾರಿಗೆ ಕೆದೂರಿನ ನಿವಾಸಿ ರಾಮ ಪೂಜಾರಿ ಮನೆಯ ಫ್ರಿಜ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು ಇದರಿಂದ ಬೆಂಕಿಯ ಕಿಡಿಗಳು ಹೊರಗೆ ಹಾರಿ ಅಲ್ಲಿಯೇ ಮನೆಯಂಗಳದಲ್ಲಿ ನಿಲ್ಲಿಸಿದ್ದ ಓಮ್ನಿ ಕಾರಿಗೆ ಹತ್ತಿ ಉರಿದು ಸಂಪೂರ್ಣ ಭಸ್ಮಗೊಂಡಿದೆ. ಪ್ರಿಜ್ ಕೂಡ ಸುಟ್ಟು ಕರಕಲಾಗಿದ್ದು ಅಲ್ಲೇ ಸಮೀಪದಲ್ಲೇ ಇದ್ದ ಕೊಟ್ಟಿಗೆಗೆ ಬೆಂಕಿ ವ್ಯಾಪಿಸಿದೆ. ಪರಿಣಾಮ ಕೊಟ್ಟಿಗೆಯ ಮಾಳಿಗೆಯಲ್ಲಿ ದಾಸ್ತಾನು ಮಾಡಿಟ್ಟಿದ್ದ ಹುಲ್ಲಿಗೆ ಬೆಂಕಿ ತಗುಲಿ ಕೊಟ್ಟಿಗೆ ಹತ್ತಿ ಉರಿದಿದೆ. ಇದರಿಂದ ಕಟ್ಟಿ ಹಾಕಿದ್ದ ಹಸುಗಳು ಸಾವನ್ನಪ್ಪಿವೆ. ಮನೆಯ ಒಂದು ಬದಿಯ ಕಿಟಕಿಯೂ ಸಂಪೂರ್ಣ ಸುಟ್ಟು ಕರಕಲಾಗಿದೆ ಹಾಗೂ ಕೊಟ್ಟಿಗೆಯಲ್ಲಿಡಲಾಗಿದ್ದ ಮರಮಟ್ಟುಗಳು ಹಾನಿಗೀಡಾಗಿವೆ. ಈ ಘಟನೆ ನಡೆಯುವಾಗ ಮನೆಯಲ್ಲಿ ರಾಮ ಪೂಜಾರಿ ಮಾತ್ರ ಇದ್ದರು ಎನ್ನಲಾಗಿದೆ.
 ಬಳಿಕ ಸ್ಥಳಕ್ಕೆ ದೌಡಾಯಿಸಿದ ಕುಂದಾಪುರ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಕೋಟ ಪೊಲೀಸರು, ಕೆದೂರು ಪಂಚಾಯತ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement