ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಹೈದರಾಬಾದ್ ಸರಣಿ ಸ್ಫೋಟ: ಖಂಡನೆ

Mainashree
Updated On : 24 Feb 2013, 11:17 am

ಉಡುಪಿ: ಇತ್ತೀಚೆಗೆ ಹೈದರಾಬಾದ್‌ನಲ್ಲಿ ಸಂಭವಿಸಿದ ಸರಣಿ ಸ್ಫೋಟವು ಹಲವು ಜನರ ಸಾವು ನೋವಿಗೆ ಕಾರಣವಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಬಗ್ಗೆ ಕೇಂದ್ರ ಸರ್ಕಾರಕ್ಕೆ 2 ದಿನ ಮುಂಚಿತವಾಗಿ ಮಾಹಿತಿ ನೀಡಿದ್ದರೂ ಕೂಡ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದಿರುವ ಕ್ಯಾಂಪಸ್ ಫ್ರೆಂಟ್ ಉಡುಪಿ ಜಿಲ್ಲಾ ಘಟಕವು, ಈ ಬಾಂಬ್ ಸ್ಫೋಟ ಹಾಗೂ ಸರ್ಕಾರ ವೈಫಲ್ಯವನ್ನು ತೀವ್ರವಾಗಿ ಖಂಡಿಸಿದೆ ಮತ್ತು ಯಾವುದೇ ಪಕ್ಷಪಾತವಿಲ್ಲದೆ ನೈಜ ತನಿಖೆ ಮಾಡಿ ನಿಜವಾದ ಅಪರಾಧಿಗಳನ್ನು ಕೂಡಲೇ ಬಂಧಿಸಬೇಕಾಗಿ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದೆ.
ಪ್ರಾಣಯೋಗ ಉಚಿತ ಶಿಬಿರ
ಬ್ರಹ್ಮಾವರ: ಇಲ್ಲಿನ ಪತಂಜಲಿ ಯೋಗ ಪೀಠ ಹರಿದ್ವಾರ ಮತ್ತು ಜಯಂಟ್ಸ್ ಗ್ರೂಪ್ ಇವರ ಸಹಭಾಗಿತ್ವದಲ್ಲಿ ಬಾಬಾ ಶ್ರೀರಾಮದೇವಜಿ ಮಹಾರಾಜ್ ಅವರಿಂದ ತರಬೇತಿಗೊಂಡ ಸದಾನಂದ ರಾಯ ಇವರಿಂದ ಒಂದು ವಾರ ಅವಧಿಯ ಉಚಿತ ಪ್ರಾಣಯೋಗ ಶಿಬಿರವು ಬ್ರಹ್ಮಾವರದ ಬೋರ್ಡ್ ಶಾಲಾ ವಠಾರದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಪತ್ರಕರ್ತ ಪ್ರವೀಣ್, ಸುಬ್ರಹ್ಮಣ್ಯ ಯಾದವ್, ಜಯಂಟ್ಸ್ ಗ್ರೂಪ್ ಸಂಸ್ಥೆಯ ವಿವೇಕ್ ಕಾಮತ್, ಮಧುಸೂದನ್ ಹೇರೂರು, ಮಧುಸೂದನ್ ಪೈ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement