ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಅಂಬಾಗಿಲು: ಮಕ್ಕಳ ಚಿತ್ರಕಲಾ ಪ್ರದರ್ಶನ

Lingaraj Badiger
Updated On : 26 Feb 2013, 11:10 am

ಉಡುಪಿ: ಇಲ್ಲಿನ ಅಂಬಾಗಿಲಿನ ಗೆರೆಬರೆ ಚಿತ್ರಕಲಾ ತರಬೇತಿ ಕೇಂದ್ರ ಇದರ 8ನೇ ವರ್ಷಾಚರಣೆಯ ಅಂಗವಾಗಿ ಮಕ್ಕಳ ಚಿತ್ರಕಲಾ ಪ್ರದರ್ಶನ ಗೆರೆಬರೆ ಆವರಣದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ಸಂವತ್ಸರದ ಸಲುವಾಗಿ ವಿವೇಕವಾಣಿ ಒಂದು ನೆನಪು ಶೀರ್ಷಿಕೆಯಡಿ ಮಕ್ಕಳು ಬರೆದ ವಿವೇಕಾನಂದರ ಭಾವಚಿತ್ರಗಳನ್ನು ಅನಾವರಗೊಳಿಸಲಾಯಿತು.
ಪ್ರದರ್ಶನವನ್ನು ಉದ್ಘಾಟಿಸಿದ ಕೊಡವೂರು ನೃತ್ಯ ನಿಕೇತನದ ವಿದುಷಿ ಮಾನಸಿ ಸುಧೀರ್ ಮಾತನಾಡಿ, ವಿವೇಕಾನಂದರ ಸಂದೇಶಗಳು ಅವರ ಭಾವಚಿತ್ರಗಳಷ್ಟೇ ವೈವಿಧ್ಯಮಯ. ಅವು ಎಲ್ಲರಿಗೂ ಸ್ಪೂರ್ತಿದಾಯಕ ಮತ್ತು ಆದರ್ಶ ಬದುಕಿಗೆ ಮಾರ್ಗದರ್ಶನ ನೀಡುವಂಥದ್ದು. ಈ ಮೂಲಕ ಹೊಸ ಪೀಳಿಗೆಯ ಗಮನ ಸೆಳೆದ ಗೆರೆಬರೆ ಸೃಜನಾತ್ಮಕ ಕೆಲಸ ಮಾಡಿದೆ ಎಂದರು.
ಕಲಾಂಗಣದ ಮಾಲೀಕ ಮಾಧವ ಗಾಂಸ್ಕರ್ ಅವರು 2013ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಇತ್ತೀಚೆಗೆ ಏರ್ಪಡಿಸಿದ್ದ ಕ್ಯಾಲಿಗ್ರಾಫಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಗೆರೆಬರೆಯ ಪ್ರಾಂಶುಪಾಲ ಸುಧೀಂದ್ರ ಗಾಂಸ್ಕರ್, ಕಲಾಶಿಕ್ಷಕ ಫಾರುಕ್, ದೀಪಿಕಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜೀವನ್ ಶೆಟ್ಟಿ ಸಂಯೋಜಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement