ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ವಾಚನ- ಗಾಯನ- ನರ್ತನ- ಚಿತ್ರಣ

Rashmi Kasaragodu
Updated On : 28 Feb 2013, 12:25 pm

ಉಡುಪಿ: ಮಂದಾರ್ತಿಯಲ್ಲಿ ಇತ್ತೀಚೆದೆ ಜಿಲ್ಲಾ ಕಸಾಪ ಮತ್ತು ತಾಲೂಕು ಘಟಕ ವತಿಯಿಂದ ಸಾಹಿತಿ ಕು.ಗೋ. ಅಧ್ಯಕ್ಷತೆಯಲ್ಲಿ 9ನೇ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು.
ಈ ಸಮ್ಮೇಳನದ ಅಂಗವಾಗಿ ವಾಚನ- ಗಾಯನ- ನರ್ತನ- ಚಿತ್ರಣ ಎಂಬ ವೈಶಿಷ್ಟ್ಯಪೂರ್ಣ ಕಾರ್ಯಕ್ರಮವನ್ನು ರಂಗಕರ್ಮಿ ಗುರುರಾಜ ಮಾರ್ಪಳ್ಳಿ ಅವರ ಉಸ್ತುವಾರಿಯಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಉದಯ ಶೆಟ್ಟಿ, ಜ್ಯೋತಿ ಮಹಾದೇವ್, ಜಿ.ಯು. ನಾಯಕ್, ಮೇಟಿ ಮುದಿಯಪ್ಪ, ವೀರೇಶ ಅಲ್ತಾರು ನಾಗರಾಜ ಅವರು ಸಾಹಿತ್ಯ ವಾಚನಗೈದರು. ಮಾಲಿನಿ ರಮೇಶ್, ಅನುರಾಧ ಮಯ್ಯ, ಮೂಕಾಂಬಿಕಾ ಉಡುಪ ಅವರು ಗೀತೆ ಗಾಯನ ಮಾಡಿದರು.
ಈ ಗಾಯನಕ್ಕೆ ಅನನ್ಯ, ಅಪೇಕ್ಷಾ, ಐಶ್ವರ್ಯ, ಶ್ರೇಯ, ರಚನಾ, ಅಪೂರ್ವ, ಶ್ರಾವಿತ, ಸುದೀಪ್, ಪ್ರೇರಿತ್ ಅವರು ನರ್ತಿಸಿದರು. ಕಲಾವಿದ ಪಿ.ಎನ್. ಆಚಾರ್ಯ ಗಾಯನದ ಭಾವನೆಗೆ ಸರಿಯಾಗಿ ಹಲವಾರು ಚಿತ್ರಗಳನ್ನು ರಚಿಸಿ ಮೆರುಗು ತಂದರು.
ಪಾರ್ಥಸಾರಥಿ ಸ್ವಾಗತಿಸಿದರು. ಪ್ರಭಾಕರ ನೀಲಾವರ ನಿರೂಪಿಸಿದರು. ನರಸಿಂಹ ನಾಯಕ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement