ಪ್ರತಿಭಟನೆ ದಿಕ್ಕು ತಪ್ಪಿಸುವ ತಂತ್ರ: ಕಾಂಗ್ರೆಸ್ ಆರೋಪ
ಹೆಬ್ರಿ: ಹೆಬ್ರಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಬಗ್ಗೆ ಬಿಜೆಪಿ ನಡೆಸಿದ ಪ್ರತಿಭಟನೆ ಜನರನ್ನು ದಿಕ್ಕುತಪ್ಪಿಸುವ ತಂತ್ರ. ಹೆಬ್ರಿಯಲ್ಲಿ ಎಲ್ಲಾ ವಿಚಾರದಲ್ಲೂ ಜನರ ವಿರೋಧ ಕಟ್ಟಿಕೊಂಡ ಬಿಜೆಪಿಗೆ ಈಗ ಬೇರೆ ದಾರಿಯಿಲ್ಲ. ಹೆಬ್ರಿ ತಾಲೂಕು ರಚನೆಗೆ ಅಡ್ಡಗಾಲಿಟ್ಟರು. ಈಗ ಜನರಿಂದ ಮುಖ ಉಳಿಸಿಕೊಳ್ಳಲು ಚುನಾವಣೆ ಬರುತ್ತಿರುವಾಗ ಹೊಸ ತಂತ್ರ ರೂಪಿಸಿದ್ದಾರೆ ಎಂದು ಜಿ.ಪಂ. ಸದಸ್ಯ ಮಂಜುನಾಥ ಪೂಜಾರಿ ಹೇಳಿದ್ದಾರೆ.
ನೀರಿನ ಯೋಜನೆಯ ಬಗ್ಗೆ ಇಲಾಖೆಯ ಅಧಿಕಾರಿಗಳೇ ಇತ್ತೀಚೆಗೆ ಕಳಪೆ ಕಾಮಗಾರಿ ನಡೆದಿಲ್ಲ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದರೂ ಬಿಜೆಪಿಯವರು ಮತ್ತೇ ಜನರನ್ನು ವಂಚಿಸುತ್ತಿದ್ದಾರೆ. ಈಗ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿದ್ದು ಇದು ಜನರಿಗೆ ತಿಳಿದಿದೆ ಎಂದರು.