ಕಾರು-ಬಸ್ ಮುಖಾಮುಖಿ; ಓರ್ವ ಸಾವು, ನಾಲ್ವರು ಗಂಭೀರ
ಕುಂದಾಪುರ: ಸಾಸ್ತಾನದ ಐರೋಡಿ ಸಮೀಪದ ರಾ.ಹೆ.66ರಲ್ಲಿ ಓಮ್ನಿ ಕಾರಿಗೆ ಬಸ್ ಮುಖಾಮುಖಿ ಡಿಕ್ಕಿಯಾಗಿ ಓಮ್ನಿ ಪ್ರಯಾಣಿಕರೊಬ್ಬರು ಸಾವನ್ನಪ್ಪಿದ್ದು ಉಳಿದ ನಾಲ್ವರು ಗಂಭೀರ ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಕುಂದಾಪುರ ನಿವಾಸಿ ನವೀನ (36) ಮೃತರು. ವಿಮಲೇಶ್ ಶೇಟ್, ಮನೋಜ ಜೋಗಿ, ಸಂತೋಷ ಖಾರ್ವಿ, ವರದರಾಜ ಖಾರ್ವಿ ಗಾಯಾಳುಗಳಾಗಿದ್ದು ಆಸ್ಪತ್ರೆಗೆ ದಾಳಿಸಲಾಗಿದೆ. ಮಧ್ಯಾಹ್ನ ಊಟ ಮುಗಿಸಿ ಮನೆಯಿಂದ ಈ 5 ಮಂದಿ ಓಮ್ನಿಯಲ್ಲಿ ಉಡುಪಿಯ ಬೀಚ್ ಉತ್ಸವಕ್ಕೆಂದು ಹೊರಟಿದ್ದು ಈ ಅಪಘಾತ ಸಂಭವಿಸಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.