'ಕರ್ಣನ ನಿರ್ಧಾರ' ಗಮಕ ವಾಚನ
ಕೋಟ: ಕನ್ನಡ ಸಂಸ್ಕೃತಿ ಇಲಾಖೆ ಇದರ ಆಶ್ರಯದಲ್ಲಿ ಸ್ಥಳೀಯ ಪ್ರಾಯೋಜಿತ ಕಾರ್ಯಕ್ರಮವಾಗಿ ಕೋಟ ವಿವೇಕ ಬಾಲಕಿಯರ ಪ್ರೌಢಶಾಲಾ ಸ್ವರ್ಣಾ ಭವನದಲ್ಲಿ ಇತ್ತೀಚೆಗೆ ಕುಮಾರವ್ಯಾಸ ಭಾರತದಿಂದ ಆರಿಸಿದ 'ಕರ್ಣನ ನಿರ್ಧಾರ' ಎಂಬ ಕಥಾಭಾಗದ ಗಮಕ ಕಾರ್ಯಕ್ರಮವು ಇತ್ತೀಚೆಗೆ ಜರಗಿತು.
ಸಮಾರಂಭದಲ್ಲಿ ರಾಮಚಂದ್ರ ಐತಾಳ ಅವರು ಗಮಕ ವಾಚನ ನಡೆಸಿ ಬಿ. ನಾಗೇಶ ರಾವ್ ವ್ಯಾಖ್ಯಾನ ನೀಡಿದರು. ಕರ್ಣನ ನಿರ್ಧಾರದ ಮಹತ್ವವನ್ನು ವಿವರಿಸಿ ಆತನ ಧೀರೋದಾತ್ತ ವ್ಯಕ್ತಿತ್ವವನ್ನು ನಿರೂಪಿಸಿದರು, ನೈತಿಕ ಮೌಲ್ಯಗಳತ್ತ ಬೆಳಕು ಚೆಲ್ಲಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾದ್ಯಾಯ ಶ್ರೀಪತಿ ಹೇರ್ಳೆ ಸ್ವಾಗತಿಸಿದರು. ನರೇಂದ್ರ ಕುಮಾರ್ ವಂದಿಸಿದರು. ಸಹಶಿಕ್ಷಕಿ ಶಾಲಿನಿ ಮತ್ತು ಶಿಕ್ಷಕ ಗಣೇಶ್ ಶೆಟ್ಟಿಗಾರ್ ಹಾಗೂ ಶಾಲಾ ಸಾಹಿತ್ಯ ಸಂಘದ ವಿದ್ಯಾರ್ಥಿನಿಯರು ಸಹಕರಿಸಿದರು.