ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಫೆ.1ರಿಂದ ಶ್ರೀ ಪುರಂದರದಾಸ, ಸಂಗೀತ ತ್ರಿಮೂರ್ತಿ ಉತ್ಸವ

Mainashree
Updated On : 22 Jan 2013, 2:28 am

ಉಡುಪಿ: ಇಲ್ಲಿನ ರಾಗಧನ ಸಂಸ್ಥೆ ಈ ವರ್ಷ ಬೆಳ್ಳಿಹಬ್ಬ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಫೆ.1ರಿಂದ 3ರವರೆಗೆ ಶ್ರೀ ಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವ ಆಚರಿಸುವ ಮೂಲಕ ಬೆಳ್ಳಿಹಬ್ಬಕ್ಕೆ ಚಾಲನೆ ನೀಡಲಿದೆ.
ಮಣಿಪಾಲ ವಿ.ವಿ.ಯ ಎಡ್ಯು ಬಿಲ್ಡಿಂಗ್‌ನ ನೆಲ ಅಂತಸ್ತಿನಲ್ಲಿ ಈ 3 ದಿನಗಳ ಸಂಗೀತೋತ್ಸವ ನಡೆಯಲಿದೆ.
ಉದ್ಘಾಟನೆ: ಫೆ.1ರಂದು ಸಂಜೆ 5.45ಕ್ಕೆ ಮಣಿಪಾಲ ವಿವಿಯ ಸಾಂಸ್ಕೃತಿಕ ಸಂಯೋಜನಾ ಸಮಿತಿ ಅಧ್ಯಕ್ಷ ಡಾ. ಮುರಳೀಧರ ವಿ. ಪೈ ಸಂಗೀತೋತ್ಸವ ಉದ್ಘಾಟಿಸಲಿದ್ದಾರೆ. ಬಳಿಕ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ನಡೆಯಲಿದೆ. ಸಂಜೆ 7 ಗಂಟೆಗೆ 'ಕರ್ನಾಟಕ ಸಂಗೀತದಲ್ಲಿ ಪರಂಪರೆ ಮತ್ತು ಪ್ರಯೋಗ'  ಕುರಿತು ಕಲಾ ವಿಮರ್ಶಕ ಎ. ಈಶ್ವರಯ್ಯ ಅವರಿಂದ ಉಪನ್ಯಾಸ ಮತ್ತು ಸಂವಾದ ಏರ್ಪಡಿಸಲಾಗಿದೆ.
ಫೆ.2ರಂದು ಸಂಜೆ 5.30ಕ್ಕೆ ಚೆನ್ನೈನ ವಸುಧಾ ಕೇಶವ ಮತ್ತು ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ. ಫೆ.2ರಂದು ಬೆಳಗ್ಗೆ 10 ಗಂಟೆಗೆ ಜ್ಯೋತಿಲಕ್ಷ್ಮೀ ಮತ್ತು ಬಳಗದವರಿಂದ ಕರ್ನಾಟಕ ಸಂಗೀತ, 11 ಗಂಟೆಗೆ ಹರೀಶ ಹೆಗಡೆ ಹಳಹಳ್ಳಿ ಮತ್ತು ಬಳಗದವರಿಂದ ಹಿಂದುಸ್ಥಾನಿ ಗಾಯನ, ಅಪರಾಹ್ನ 2 ಗಂಟೆಗೆ ಮಂಗಳೂರಿನ ಕೃಷ್ಣಪವನ್ ಕುಮಾರ್ ಬಳಗದಿಂದ ವೇಣುವಾದನ ನಡೆಯಲಿದೆ.
ಸಮಾರೋಪ: ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ರಾಜ್ಯ ಕನ್ನಡ ಸಂಸ್ಕೃತಿ ಇಲಾಖೆ ಉಪ ಕಾರ್ಯದರ್ಶಿ ಸುಧಾಕರ ಶೆಟ್ಟಿ ಕೆ. ಮತ್ತು ಮಂಗಳೂರಿನ ಮಣಿಕೃಷ್ಣಸ್ವಾಮಿ ಅಕಾಡಮಿ ನಿರ್ದೇಶಕ ಪಿ. ನಿತ್ಯಾನಂದ ರಾವ್ ಭಾಗವಹಿಸಲಿದ್ದಾರೆ. 5 ಗಂಟೆಗೆ ಚೆನ್ನೈನ ರಂಜನಿ-ಗಾಯತ್ರಿ ಮತ್ತು ಬಳಗದವರಿಂದ ಕರ್ನಾಟಕ ಸಂಗೀತ ಆಯೋಜಿಸಲಾಗಿದೆ.
ಬೆಳ್ಳಿಹಬ್ಬದ ಪ್ರಯುಕ್ತ ವರ್ಷವಿಡೀ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂಸ್ಥೆಯ 2014 ಫೆಬ್ರವರಿಯಲ್ಲಿ ಸಮಾರೋಪ ಕಾರ್ಯಕ್ರಮ ಇರಿಸಿಕೊಳ್ಳಲಿದೆ. ಮುಂದಿನ 1 ವರ್ಷ ಕಾಲ ಸ್ಥಳೀಯ ಕಲಾವಿದರಿಂದ ಗೃಹ ಸಂಗೀತ ಮಾಲಿಕೆ, ಉಪನ್ಯಾಸಗಳು ಹಾಗೂ ರಾಷ್ಟ್ರೀಯ ಮಟ್ಟದ ಶಾಸ್ತ್ರೀಯ ಸಂಗೀತ ಸ್ಪರ್ಧೆ ಏರ್ಪಡಿಸಲಿದೆ. ರಾಗಧನ ಆಶ್ರಯದಲ್ಲಿ ಸಂಗೀತ ಕಛೇರಿ ನೀಡಬಯಸುವವರು ಸಂಸ್ಥೆಯ ಪ್ರಮುಖರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement