ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Mainashree
Updated On : 25 Jan 2013, 12:02 pm

ಉಪ್ಪಿನಂಗಡಿ: ಇಲ್ಲಿನ ಸಮೀಪದ ಹಿರೆಬಂಡಾಡಿ ಗ್ರಾಮದ ನಂದಿನಿ ನಗರ ನಿವಾಸಿ ಹರೀಶ್ ಯಾನೆ ಎನ್.ಎ. ಹರೀಶ್ ಕಣ್ಮರೆಯಾಗಿದ್ದಾತ ಪತ್ತೆಯಾಗಿ, ನಂತರ ಕೆಲಸಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದಾತ ಮಂಗಳೂರಿನ ವಸತಿ ಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ವರದಿಯಾಗಿದೆ.
ಅಣ್ಣು ಪೂಜಾರಿ ಎಂಬವರ ಮಗ ಹರೀಶ್ ವಿವಾಹಿತನಾಗಿದ್ದು, ಇಬ್ಬರು ಹೆಣ್ಣು ಮಕ್ಕಳ ತಂದೆ. ಜ. 14 ರಂದು ಇನ್ನು ಎರಡು ವರ್ಷ ನಾನು ಬರುವುದಿಲ್ಲವೆಂದು ಹೇಳಿ ಹೋದಾತನನ್ನು ಮಂಗಳೂರಿನ ರೇಲ್ವೆ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಮನೆಗೆ ಕರೆ ತರಲಾಗಿತ್ತು.
ನಂತರ ತನಗೆ ಬೆಂಗಳೂರಿನಲ್ಲಿ ಉದ್ಯೋಗ ದೊರೆತಿದೆ. ನಾನು ಅಲ್ಲಿಗೆ ಹೋಗಲೇಬೇಕೆಂದು ಪಟ್ಟು ಹಿಡಿದ ಆತನ ನಿಲುವಿಗೆ ಸ್ಪಂದಿಸಿ ಮನೆ ಮಂದಿ ಆತನನ್ನು ಬೆಂಗಳೂರಿಗೆ ಕಳುಹಿಸಿದ್ದರು. ಆದರೆ, ಬೆಂಗಳೂರಿಗೆ ರೈಲು ತಲುಪಿದ್ದಂತೆಯೇ ಮತ್ತೆ ಮಂಗಳೂರಿನತ್ತ ಪ್ರಯಾಣಿಸಿ, ಮಂಗಳೂರಿನ ಬಂದರು ಠಾಣಾ ವ್ಯಾಪ್ತಿಯ ವಸತಿ ಗೃಹದಲ್ಲಿ ರೂಮ್ ಬಾಡಿಗೆ ಪಡೆದುಕೊಂಡು ಅಲ್ಲಿ ತನ್ನ ಎರಡೂ ಕೈಗಳ ನರ ಕತ್ತರಿಸಿ ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಮನೆಯಿಂದ ಕಣ್ಮರೆಯಾಗುವ ವಿಚಾರಕ್ಕೂ, ಬಳಿಕ ಕೆಲಸದ ನೆಪದಲ್ಲಿ ಬೆಂಗಳೂರಿಗೆ ಹೋಗಿ ಮಂಗಳೂರಿನಲ್ಲಿ ಆತ್ಮಹತ್ಯೆಗೈದಿರುವುದಕ್ಕೂ ನಿಖರವಾದ ಕಾರಣ ತಿಳಿದುಬಂದಿಲ್ಲ. ಯಾವುದೋ ಬಲವಾದ ಕಾರಣ ಈ ಘಟನೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ಈ ಬಗ್ಗೆ ಮಂಗಳೂರು ಬಂದರು ಠಾಣೆಯಲ್ಲಿ ಕೇಸು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement