ಗಣವೇಷ ಪ್ರತಿಕೃತಿ ತಂದಿಟ್ಟು ಅವಮಾನ: ಪೊಲೀಸರಿಗೆ ದೂರು
ಉಡುಪಿ: ಇಲ್ಲಿನ ಮೂಡಬೆಟ್ಟು ಗ್ರಾಮದ ಕೊಡವೂರು ಎಂಬಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷ ಪ್ರತಿಕೃತಿ ತಂದಿಟ್ಟು ಪರಿಸರ ಸಾಮರಸ್ಯ ಕದಡುವ ಪ್ರಯತ್ನ ನಡೆಸಲಾಗಿದೆ ಎಂದು ಉಡುಪಿ ನಗರ ಠಾಣೆಯಲ್ಲಿ ದೂರೊಂದು ದಾಖಲಾಗಿದೆ. ಕೊಡವೂರು ತಿರುವಿನಲ್ಲಿ ಕಿಡಿಗೇಡಿಗಳು ಆರೆಸ್ಸೆಸ್ ಗಣವೇಷಧಾರಿ ಪ್ರತಿಕೃತಿ ಮಾಡಿ ಅದರ ಒಂದು ಕೈಯಲ್ಲಿ ಬಿಜೆಪಿ ಧ್ವಜ ಹಾಗೂ ಇನ್ನೊಂದು ಕೈಯಲ್ಲಿ ಎಬಿವಿಪಿ ಧ್ವಜವಿಟ್ಟು ಪ್ರತಿಕೃತಿಯ ಎದೆ ಮೇಲೆ ಹಿಂದೂ ಭಯೋತ್ಪಾದಕರ ಸಭೆಗೆ ಸ್ವಾಗತ (ಫೆ.3) ಎಂದು ಬರೆಯಲಾಗಿದೆ. ಅಲ್ಲದೆ, ಪ್ರತಿಕೃತಿಗೆ ಚಪ್ಪಲಿ ಹಾರವನ್ನೂ ಹಾಕಲಾಗಿದೆ. ಸಾಮರಸ್ಯ ಕದಡುವ ದೃಷ್ಟಿಯಿಂದ ಈ ಕೃತ್ಯವೆಸಗಲಾಗಿದೆ ಎಂದು ಬಿಜೆಪಿಯ ಸ್ಥಳೀಯ ನಾಯಕ ಮಧ್ವನಗರ ಶಂಕರ ಪೂಜಾರಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.