ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕಡಲು ಕಳ್ಳರ ಭಯ ಇಲ್ಲ, ಪ್ರಾಯೋಜಕರ ಕೊರತೆ ಭಯ

Lingaraj Badiger
Updated On : 29 Jan 2013, 12:01 pm

ಮಂಗಳೂರು: ದೋಣಿಯಲ್ಲಿ ವಿಶ್ವಪರ್ಯಟನೆಗೆ ಮುಂದಾಗಿರುವ ಸ್ಯಾಂಡಿ ರಾಬ್ಸನ್ ಸೋಮವಾರ ಮಂಗಳೂರು ಕಡಲ ಕಿನಾರೆಯಲ್ಲಿ ಸಂಚರಿಸಿ, ಸಂಚಲನ ನೀಡಿದರು. ಸೋಮವಾರ ಮಧ್ಯಾಹ್ನ ಸೇಂಟ್ ಆಗ್ನೇಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜತೆ ಸ್ಯಾಂಡಿ ಸಂವಾದ ನಡೆಸಿದರು.
 45 ವರ್ಷದ ಆಸ್ಟ್ರೇಲಿಯಾ ಪ್ರಜೆ ಸ್ಯಾಂಡಿ 5 ವರ್ಷದಲ್ಲಿ 50 ಸಾವಿರ ಕಿ.ಮೀ. ಸಂಚರಿಸುವ ಸಂಕಲ್ಪ ಹೊಂದಿದ್ದಾರೆ. '1932ರಲ್ಲಿ ಜರ್ಮನಿಯಿಂದ ಆಸ್ಟ್ರೇಲಿಯಾ ವರೆಗೆ 7 ವರ್ಷಗಳ ಕಾಲ ಸಮುದ್ರದಲ್ಲಿ ಸಂಚರಿಸಿ ವಿಶ್ವ ಪರ್ಯಟನೆ ಮಾಡಿದ ಆಸ್ಕರ್ ಸ್ಪೆಕ್ ಸಾಹಸ ನನಗೆ ಸ್ಫೂರ್ತಿ ನೀಡಿತು. 5 ವರ್ಷಗಳಲ್ಲಿ ಆಸ್ಕರ್ ಹಾಗೆ ವಿಶ್ವ ಪರ್ಯಟನೆ ಮಾಡಬೇಕು ಎಂಬ ಆಸೆ ಇದೆ' ಎಂದು ಸ್ಯಾಂಡಿ ಹೇಳಿದರು.
 2011ರ ಮೇ ತಿಂಗಳಲ್ಲಿ ಜರ್ಮನಿಯಿಂದ ಪರ್ಯಟನೆ ಆರಂಭಿಸಿದೆ. ಆಸ್ಟ್ರೇಲಿಯ, ಹಂಗೇರಿ, ಸರ್ಬಿಯ ಸಿಪ್ರಸ್, ಟರ್ಕಿ ಹಾದು ಭಾರತಕ್ಕೆ ಬಂದಿದ್ದೇನೆ. 5 ಸಾವಿರ ಕಿ.ಮೀ. ಈಗಾಗಲೇ ಪೂರೈಸಿದ್ದೇನೆ. ಮಂಗಳವಾರ ಕುಂಬ್ಳೆ ಮೂಲಕ ಕೇರಳ ಪ್ರವೇಶಿಸುತ್ತೇನೆ ಎಂದರು.
ಕಡಲ್ಗಳ್ಳರ ಭಯ ಇಲ್ಲ: ನಿಮಗೆ ಕಡಲ್ಗಳ್ಳರ ಭಯ ಇಲ್ಲವೇ ಎಂದು ಪ್ರಶ್ನಿಸಿದರೆ ಹಾಗೇನಿಲ್ಲ, ನನಗೇನಿದ್ದರೂ ಪ್ರಾಯೋಜಕರ ಕೊರತೆ ಭಯ ಕಾಡುತ್ತದೆ ಎಂದು ಪ್ರತಿಕ್ರಿಯಿಸಿದರು!
 ದಿನಕ್ಕೆ 35ರಿಂದ 40 ಕಿ.ಮೀ. ಸಂಚರಿಸಿ ಮನೆ, ಅಥವಾ ರೆಸಾರ್ಟ್ ಸಿಕ್ಕಿದರೆ ಅಲ್ಲಿ ತಂಗುತ್ತೇನೆ. ಇಲ್ಲವಾದರೆ ಕಡಲ ತೀರದಲ್ಲಿ ಟೆಂಟ್ ಹಾಕಿ ಮಲಗುತ್ತೇನೆ ಎಂದರು.
 ಭಾರತ ಸುಂದರ ದೇಶ. ಅತ್ಯುತ್ತಮವಾದ ಕಡಲ ತೀರಗಳಿವೆ. ತೋಟಗಳಿವೆ ಆದರೆ ತುಂಬಾ ನಿರ್ಲಕ್ಷ್ಯವೂ ಇದೆ ಎಂದರು. ಪರಿಸರ ಬಗ್ಗೆ ಕಾಳಜಿ ವಹಿಸಿಕೊಳ್ಳಿ, ಕಡಲ ತೀರ ಶುಚಿಯಾಗಿ ಇಟ್ಟುಕೊಳ್ಳಿ ಎಂದು ಸಲಹೆ ಮಾಡಿದರು.
ಡಾ.ಪ್ರಭಾ ದೇವಿ ಆಳ್ವಾ ಸ್ವಾಗತಿಸಿದರು, ಡಾ.ಪ್ರೇಮ್ ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement