ನಂದಿನಿ ನದಿ ತಡಗೋಡೆ ಪುನರ್ ನಿರ್ಮಾಣ
ಮೂಲ್ಕಿ: ಕೆಮ್ರಾಲ್ ಗ್ರಾ.ಪಂ. ಪಂಜದ ಉಲ್ಯದಲ್ಲಿ ನಂದಿನಿ ತಡೆಗೋಡೆ ಪುನರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಯೋಜನೆಯಲ್ಲಿ ರು. 10 ಲಕ್ಷ ಮಂಜೂರಾಗಿದ್ದು ಫೆಬ್ರವರಿ ತಿಂಗಳಿನಲ್ಲಿ ಕಾಮಗಾರಿ ಆರಂಭವಾಗಲಿದೆ. ಪಕ್ಷಿಕೆರೆ ಚರ್ಚ್ನಿಂದ ಪಂಜ ನಂದಿನಿ ನದಿಯ ತೀರದಿಂದ ಸೂರಿಂಜೆ ಸಂಪರ್ಕಿಸುವ ರಸ್ತೆ ರು. 3 ಕೋಟಿ ವೆಚ್ಚದಲ್ಲಿ ಅಗಲೀಕರಣ ಕಾರ್ಯ ನಡೆದು ಡಾಂಬರೀಕರಣಗೊಳ್ಳಲಿದ ಎಂದು ವಿಪಕ್ಷ ಮುಖ್ಯ ಸಚೇತಕ ಕೆ. ಅಭಯಚಂದ್ರ ಜೈನ್ ತಿಳಿಸಿದ್ದಾರೆ.