ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ರಾಮ ಆರಾಧನೆ ಕಡಿಮೆಯಾದರೆ ಸಂಸ್ಕೃತಿ, ದೇಶಕ್ಕೇ ಅಪಾಯ; ಹೆಗ್ಗಡೆ

Lingaraj Badiger
Updated On : 29 Jan 2013, 12:01 pm

ಬೆಳ್ತಂಗಡಿ: ಶ್ರೀರಾಮಚಂದ್ರನ ಆರಾಧನೆ ಕಡಿಮೆಯಾದರೆ ನಮ್ಮ ಸಂಸ್ಕಾರ, ಸಂಸ್ಕೃತಿ, ದೇಶಕ್ಕೆ ಅಪಾಯವಿದೆ. ಆತನ ಪೂಜೆ ಸದ್ಗುಣಗಳ ಆರಾಧನೆ ಮಾಡಿದಂತೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಸೋಮವಾರ ಉಜಿರೆ ಹಳೆಪೇಟೆ ಶ್ರೀರಾಮಮಂದಿರದ ಅಮೃತೋತ್ಸವ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಎಲ್ಲೆಡೆ  ದೇವಸ್ಥಾನಗಳನ್ನು ನಾವು ಕಾಣುತ್ತೇವೆ. ಆದರೆ ರಾಮನ ಆರಾಧನಾ ಕೇಂದ್ರ ಕಡಿಮೆಯಾಗಿವೆ. ರಾಮನ ಆದರ್ಶ ಕೈಬಿಟ್ಟರೆ ದೇಶಕ್ಕೆ ಆಪತ್ತು ನಿಶ್ಚಿತ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು,ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ: 20 ವರ್ಷಗಳಿಂದ ಭಜನಾ ಮಂದಿರದಲ್ಲಿ ಸೇವೆ ಸಲ್ಲಿಸುತ್ತಿರುವ ವೇ.ಮೂ.ಗಣೇಶ್ ಭಟ್, ಪ್ರಬಂಧಕ ಮಾಧವ ಕಾಮತ್ ಮತ್ತು ದಾನಿಗಳನ್ನು ಡಾ.ಹೆಗ್ಗಡೆ ಸಮ್ಮಾನಿಸಿದರು.
ಹಿರಿಯರಾದ ಸುಬ್ರಾಯ ಶೆಣೈ ಇದ್ದರು. ಉಪನ್ಯಾಸಕ ಪ್ರಕಾಶ್ ಪ್ರಭು ನಿರ್ವಹಿಸಿದರು. ಭಜನಾ ಮಂದಿರ ಅಧ್ಯಕ್ಷ ರಮೇಶ್ ಪ್ರಭು ಸ್ವಾಗತಿಸಿದರು. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ವಂದಿಸಿದರು.
ಹೆಗ್ಗಡೆ ಅಭಿನಂದನೆ: ಧರ್ಮಸ್ಥಳ ಧರ್ಮಾಧಿಕಾರಿಯಾಗಿದ್ದ ದಿ.ಮಂಜಯ್ಯ ಹೆಗ್ಗಡೆ ರಚಿಸಿ ಪೂಜಿಸಲು ಶ್ರೀರಾಮ ಮಂದಿರಕ್ಕೆ ಕೊಟ್ಟ  ಶ್ರೀರಾಮ ಪರಿವಾರದ ವರ್ಣಚಿತ್ರವನ್ನು ಅದೇ ರೀತಿ ಉಳಿಸಿಕೊಂಡು ಬಂದಿರುವುದಕ್ಕಾಗಿ ಡಾ.ಹೆಗ್ಗಡೆ ಸಮಾಜದವರನ್ನು ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement