ಅಖಿಲ ಕಾನೂನು ವಿದ್ಯಾಲಯ ಒಕ್ಕೂಟ ಉದ್ಘಾಟನೆ
ಉಡುಪಿ: ವಿದ್ಯಾರ್ಥಿಗಳೆಲ್ಲರೂ ಅದರಲ್ಲೂ ಢಿಮುಖ್ಯವಾಗಿ ಕಾನೂನು ಕಲಿಯುವ ವಿದ್ಯಾರ್ಥಿಗಳು ಮಾಹಿತಿ ಹಕ್ಕು, ಪಾರದರ್ಶಕ ಅಧಿನಿಯಮ ಕಾನೂನು ಮತ್ತು ಸರ್ಕಾರದ ಆಡಳಿತ ವ್ಯವಸ್ಥೆ ಈ ಮೂರು ವಿಚಾರಗಳನ್ನು ಅರಿತರೆ ಹದಗೆಟ್ಟಿರುವ ಸಮಾಜವನ್ನು ಸರಿಪಡಿಸುವಲ್ಲಿ ಬಹುದೊಡ್ಡ ಕಾಣಿಕೆ ನೀಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಹುಬ್ಬಳ್ಳಿಯ ರಾಜ್ಯ ಕಾನೂನು ವಿವಿ ಉಪಕುಲಪತಿ ಜಿ.ಆರ್. ಜಗದೀಶ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಯುವ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಅಖಿಲ ಕಾನೂನು ವಿದ್ಯಾಲಯ ಮತ್ತು ಉಡುಪಿಯ ಅಖಿಲ ಜಿಲ್ಲಾ ಕಾನೂನು ವಿದ್ಯಾಲಯ ಒಕ್ಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಎಂಬುದು ಭಾರತೀಯ ಅತ್ಯುನ್ನತ ಮೌಲ್ಯವಾಗಿದ್ದು, ಸಂಘಟನೆಗಳು ಪರಸ್ಪರ ಸಹಕಾರ ಮನೋಭಾವ ಮತ್ತು ಸಾಮರಸ್ಯದಿಂದ ಕೂಡಿರಬೇಕು. ಇದರಿಂದ ಶೈಕ್ಷಣಿಕ, ಸಮಾಜಿಕ ಅಭಿವೃದ್ಧಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಯುವ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ. ಸುರೇಶ ಗೌಡ, ರಾಜ್ಯ ವಕೀಲರ ಸಂಘದ ಸದಸ್ಯ ಹರೀಶ್, ಗ್ರಾಪಂ ಒಕ್ಕೂಟ ಉಡುಪಿಯ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಚಲನಚಿತ್ರ ನಟ ಸಚಿನ್ ಸುವರ್ಣ, ಯುವ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆ ಸದಸ್ಯ ಕಿರಣ್ ವೇದಿಕೆಯಲ್ಲಿದ್ದರು.
ಪ್ರಜ್ವಲ್ ಸ್ವಾಗತಿಸಿದರು. ಶಬೀನಾ ನಿರೂಪಿಸಿದರು.