ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಬೆಂಕಿ ಆಕಸ್ಮಿಕ; ವೃದ್ಧೆ ಸಾವು

Lingaraj Badiger
Updated On : 31 Jan 2013, 11:13 am

ಕಾಪು: ಇಲ್ಲಿನ ಪಡುಗ್ರಾಮದ ವಸತಿಗೃಹವೊಂದರಲ್ಲಿ ಬೆಂಕಿ ಆಕಸ್ಮಿಕದಿಂದ ಗಾಯಗೊಂಡಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.
 ಐಸಾಬಿ (75) ಮೃತರು. ಅವರು ಇಲ್ಲಿನ ಫೇಮಸ್ ಅಪಾರ್ಟ್‌ಮೆಂಟಿನಲ್ಲಿ ವಾಸವಾಗಿರುವ ಅಬ್ದುಲ್ ಮೊಯಿದೀನ್ ಎಂಬವರ ತಾಯಿ. ಜ. 23ರಂದು ಮನೆಯ ತಾರಸಿಯಲ್ಲಿ ಮೀನು ಫ್ರೈ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮೈಗೆ ಬೆಂಕಿ ತಾಗಿ ಸುಟ್ಟ ಗಾಯಗಳಾಗಿದ್ದವು. ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಅದೇ ದಿನ ದಾಖಲಿಸಿದ್ದು, ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಅಬ್ದುಲ್ ಮೊಯಿದೀನ್ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದು ಆತ್ಮಹತ್ಯೆ
ಉಡುಪಿ: ಶಿರ್ವದ ಬೆಳ್ಳೆ ಗ್ರಾಮದ ತೀರ್ಲಪಲ್ಕೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ. ಬೆನಡಿಕ್ಟ್ ಬ್ರೆಟ್ಟೋ (38) ಮೃತರು.
 ಅವರು ಇಲ್ಲಿನ ನಿವಾಸಿ ಅಲ್ಪ್ರೆಡ್ ಬ್ರಿಟ್ಟೋ ಎಂಬವರ ತಾಯಿ. ಅವರು ಮನೆಯಲ್ಲಿ ಒಬ್ಬರೇ ವಾಸ್ತವ್ಯ ಇದ್ದು, ಮಂಗಳವಾರ ಸಂಜೆ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಹೃದಯದ ಕಾಯಿಲೆ ಹಾಗೂ ಸಕ್ಕರೆ ಕಾಯಿಲೆ ಇದ್ದು ಈ ಕಾರಣಕ್ಕಾಗಿ ಜೀವನದಲ್ಲಿ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಸೊಸೆ ಜ್ಯೋತಿ ಬ್ರಿಟ್ಟೋ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಳೆಗೆ ಬಿದ್ದು ವ್ಯಕ್ತಿ ಸಾವು
ಉಡುಪಿ: ಹಿರಿಯಡ್ಕದ ಬೆಳ್ಳರಪಾಡಿ ಗ್ರಾಮದ ತಿಮ್ಮನಕುಮೇರಿ ಎಂಬಲ್ಲಿ ವ್ಯಕ್ತಿ ಹೊಳೆಯಲ್ಲಿ ಬಿದ್ದು ಮೃತಪಟ್ಟ ಘಟನೆ ಜ.28ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೃತರು ರಾಮಕೃಷ್ಣ ಆಚಾರ್ಯ (50) ಮೃತರು.
 ಅಂದು ಮಧ್ಯಾಹ್ನ 3 ಗಂಟೆಗೆ ಮನೆ ಸಮೀಪದ ಹೊಳೆಗೆ ಸ್ನಾನ ಮಾಡಲು ಹೋಗಿದ್ದು, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಸಹೋದರ ಗೋಪಾಲ ಆಚಾರ್ಯ ಎಂಬವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ನಾಪತ್ತೆ: ದೂರು
ಮಲ್ಪೆ: ಇಲ್ಲಿನ ಕಿದಿಯೂರು ಗ್ರಾಮ ಅಂಬಲಪಾಡಿಯಲ್ಲಿ ಯುವತಿ ಕಾಣೆಯಾದ ಘಟನೆ ಜ. 21ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸುಮಿತಾ (25) ಕಾಣೆಯಾದಾಕೆ.
  ಅಂದು ಬೆಳಗ್ಗೆ 10.30ಕ್ಕೆ ಮನೆಯಿಂದ ಉಡುಪಿಯಲ್ಲಿ ಬ್ಯುಟೀಶನ್ ಕೋರ್ಸ್‌ಗೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ನೆರೆಕರೆಯ ಪರಿಸರದಲ್ಲಿ ಹಾಗೂ ಸಂಬಂದಿಕರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಅವರ ತಾಯಿ ಸುಶೀಲ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement