ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕಲ್ಮಾಡಿ ಫ್ಲೆಕ್ಸ್ ವಿವಾದ: ಚರ್ಚ್‌ಗೆ ಕೊಲಾಸೊ ಭೇಟಿ

Rashmi Kasaragodu
Updated On : 1 Feb 2013, 12:38 pm





ಉಡುಪಿ: ಕಳೆದ ಡಿ.26ರಂದು ಇಲ್ಲಿನ ಕಲ್ಮಾಡಿಯ ಸ್ಟೆಲ್ಲಾ ಮಾರೀಸ್ ಚರ್ಚ್ ವಠಾರದಲ್ಲಿ ವೆಲಂಕಣಿ ಮಾತೆಯ ಪವಾಡಗಳ ಫ್ಲೆಕ್ಸ್ ಅಳವಡಿಸಿದ ವಿಷಯದಲ್ಲಿ ನಡೆದ ಅಪ್ರಿಯ ಘಟನೆಗಳ ಕುರಿತು ವಿವರ ತಿಳಿದುಕೊಳ್ಳಲು ಹಾಗೂ ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಕರ್ನಾಟಕ ಕ್ರೈಸ್ತ ಸಂಘಟನೆಗಳ ಅಂತಾರಾಷ್ಟ್ರೀಯ ಒಕ್ಕೂಟದ ರಾಜ್ಯಾಧ್ಯಕ್ಷ ರೋನಾಲ್ಡ್ ಕೊಲಾಸೊ ಆಗಮಿಸಿ, ಚರ್ಚ್‌ಗೆ ಭೇಟಿ ನೀಡಿ ವಿವರ ಪಡೆದರು.  
 ಘಟನೆ ಬಗ್ಗೆ ಖೇದ ವ್ಯಕ್ತಪಡಿಸಿದ ಕೊಲಾಸೋ, ಈ ಪ್ರಕಾರದ ಬ್ಯಾನರ್‌ಗಳು ವೆಲಂಕಣಿ ಮಾತೆಗೆ ಸಮರ್ಪಿಸಲ್ಪಟ್ಟ ಎಲ್ಲ ಪುಣ್ಯಕ್ಷೇತ್ರಗಳಲ್ಲಿ ಅಳವಡಿಸಿದ್ದಲ್ಲದೆ ಕ್ಯಾಲೆಂಡರ್‌ಗಳಲ್ಲಿಯೂ ಈ ಭಾವಚಿತ್ರಗಳು ಸಾರ್ವಜನಿಕರಿಗೆ ಲಭ್ಯವಿರುತ್ತದೆ. ಅದರಲ್ಲಿ ಮಾತಾ ಮರಿಯಮ್ಮ ಒಬ್ಬ ಹುಡುಗನಿಂದ ಹಾಲು ಕೇಳುವ ದೃಶ್ಯವಿದ್ದು, ಅದು ಹೇಗೆ ಇನ್ನೊಂದು ಸಮುದಾಯಕ್ಕೆ ಧರ್ಮ ನಿಂದನೆ ಆಗುತ್ತದೆ ಎಂದು ತಮಗೆ ಅರ್ಥವಾಗುತ್ತಿಲ್ಲ ಎಂದೂ ಹೇಳಿದರಲ್ಲದೆ, ಈ ಬಗ್ಗೆ ಸಂಬಂಧಪಟ್ಟ ಹಿರಿಯ ಪೊಲೀಸ್ ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು.
 ಗುರುಗಳಾದ ಆಲ್ಬನ್ ಡಿ.ಸೋಜಾ ಹಾಗೂ ಉಪಾಧ್ಯಕ್ಷ ಲೂವಿಸ್ ಲೋಬೋ ಅವರಿಂದ ಮಾಹಿತಿ ಪಡೆದರು. ಈ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆ ನಿವೃತ್ತ ಆಯುಕ್ತ ಜೆ.ಆರ್. ಲೋಬೋ ಹಾಗೂ ಇಫ್ಕಾ ಸಂಘದ ಡೆನ್ನಿಸ್ ಕಾಸ್ತಲಿನೋ, ಡಾ. ನೇರಿ ಕರ್ನೇಲಿಯೋ, ಗ್ಲಾಡಿಸ್ ಅಲ್ಮೇಡಾ ಹಾಗೂ ಇತರ ಪದಾಧಿಕಾರಿಗಳು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement