ಅಂಗಡಿಗೆ ಕ್ರೇನ್ ಡಿಕ್ಕಿ; ಇಬ್ಬರ ಸಾವು
ಮೂಲ್ಕಿ: ರಿವರ್ಸ್ ಬರುತ್ತಿದ್ದ ಕ್ರೇನ್ವೊಂದರ ಬ್ರೇಕ್ ವೈಫಲ್ಯಗೊಂಡು ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದು, ಅಲ್ಲಿಯೇ ಮಳೆಯಿಂದ ರಕ್ಷಿಸಿಕೊಳ್ಳಲು ಆಶ್ರಯ ಪಡೆದಿದ್ದ ಇಬ್ಬರು ಮೃತಪಟ್ಟ ದಾರುಣ ಘಟನೆ ಬುಧವಾರ ಮೂಲ್ಕಿ ಕಾರ್ನಾಡು ಬೈಪಾಸ್ ತಿರುವಿನಲ್ಲಿ ಸಂಭವಿಸಿದೆ. ಮೂಲ್ಕಿ ಕೊಲ್ನಾಡು ಕೈಗಾರಿಕಾ ಪ್ರದೇಶದಲ್ಲಿರುವ ರಾಮ್ಕಿ ವೈದ್ಯಕೀಯ ತ್ಯಾಜ್ಯ ಘಟಕದ ಸೂಪರ್ವೈಸರ್ ಹಾಸನ ಮೂಲಕ ನಾಗಪ್ಪ ಗೌಡ (50) ಹಾಗೂ ಇದೇ ಘಟಕದ ಕಾರ್ಮಿಕ ಬಿಜಾಪುರ ಮೂಲದ ಸೋಮಲಿಂಗಪ್ಪ (40) ಮೃತಪಟ್ಟವರು.