ಬಡ ಕುಟುಂಬಕ್ಕೆ ಮನೆ ಕಟ್ಟಿಕೊಟ್ಟ ಗೆಳೆಯರು
ಕ.ಪ್ರ.ವಾರ್ತೆ ಉಡುಪಿ ಜು. 8
ಜೋಪಡಿಯಲ್ಲಿ ಜೀವನ ಕಳೆಯುತ್ತಿದ್ದ ಬಡ ಸ್ನೇಹಿತನ ಕುಟುಂಬಕ್ಕೆ ಗೆಳೆಯರೆಲ್ಲ ಸೇರಿ ಚೊಕ್ಕ- ಸುಸಜ್ಜಿತ ಮನೆಯೊಂದನ್ನು ನಿರ್ಮಿಸಿಕೊಟ್ಟ ಅಪರೂಪದ ಬೆಳವಣಿಗೆ ಶಿರ್ವದ ಪಡುಬೆಳ್ಳೆಯಲ್ಲಿ ನಡೆದಿದೆ.
ಸ್ಥಳೀಯ ವಸಂತ ಪೂಜಾರಿ ಎಂಬವರ ಕುಟುಂಬದ ಬಡತನದ ಪರಿಸ್ಥಿತಿ ಹಾಗೂ ಮನೆ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಪಡುಬೆಳ್ಳೆಯ ಸಾಮಾಜಿಕ ಕಾರ್ಯಕರ್ತ, ಉಪನ್ಯಾಸಕ ಪ್ರೊ. ವಿನ್ಸೆಂಟ್ ಆಳ್ವ, ಗ್ರಾ.ಪಂ. ಸದಸ್ಯ ಹರೀಶ ಶೆಟ್ಟಿ, ರೇಮಸ್ t’ÑæàÞd, ವಲೇರಿಯನ್ ಆಳ್ವ, ವಿಕ್ಟರ್ ಮಿನೇಜಸ್, ದಿನೇಶ ಶೆಟ್ಟಿ, ವಿಶ್ವನಾಥ ಶೆಟ್ಟಿ, ಅಶೋಕ್ ಆಳ್ವ, ಲೂಯಿಸ್ ಆಳ್ವ, ದಯಾನಂದ ಶೆಟ್ಟಿ, ಜಗನ್ನಾಥ ಪೂಜಾರಿ ಮತ್ತಿತರರು, 3.50 ಲಕ್ಷ ವೆಚ್ಚದಲ್ಲಿ ಆಧುನಿಕ ಶೈಲಿಯಲ್ಲಿ ಮನೆ ನಿರ್ಮಿಸಿ ಬಡಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.