ಕಾಂತಾವರ ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ.ನಾ. ಮೊಗಸಾಲೆ ಪುನರಾಯ್ಕೆ
ಕಾಂತಾವರ: ಕಾಂತಾವರ ಕನ್ನಡ ಸಂಘದ 2013-2016ನೇ ಸಾಲಿನ ಕಾರ್ಯಾಧ್ಯಕ್ಷರಾಗಿ ಡಾ.ನಾ. ಮೊಗಸಾಲೆ ಮರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಸಂಘದ ಕನ್ನಡ ಭವನದಲ್ಲಿ ನಡೆದ ಸರ್ವಸದಸ್ಯರ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ವಿಠಲ ಬೇಲಾಡಿ, ಪ್ರಧಾನ ಕಾರ್ಯದರ್ಶಿಗಳಾಗಿ ನಿವೃತ್ತ ಅಂಚೆ ಪಾಲಕ, ಬರಹಗಾರ ಸದಾನಂದ ನಾರಾವಿ, ಸಹಕಾರ್ಯದರ್ಶಿಯಾಗಿ ರಾಮಕೃಷ್ಣ ಹೆಗಡೆ, ಕೋಶಾಧ್ಯಕ್ಷರಾಗಿ ಕೆ. ಗಣಪತಿ ಭಟ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಗೆ ಬೇಲಾಡಿ ರಾಮಚಂದ್ರ ಆಚಾರ್ಯ, ಕೆ. ಮೋಹನದಾಸ ಅಡ್ಯಂತಾಯ, ತಿ. ದಿವಾಕರ್ ರಾವ್, ಕೆ. ಸಂಜೀವ ಆಚಾರ್ಯ, ನಿರಂಜನ ಎನ್. ಮೊಗಸಾಲೆ, ಬಾಬು ಶೆಟ್ಟಿ ನಾರಾವಿ, ಮಂಜುನಾಥ ಶೆಟ್ಟಿ ನಿಟ್ಟೆ, ವಸಂತ ಸಪಳಿಗ, ಸಂಜೀವ ಒಡ್ಡೊಟ್ಟು ಮತ್ತು ನಯನ್ ಕುಮಾರ್ ಜೈನ್ ಆಯ್ಕೆಯಾದರು.
ಕಾರ್ಯಕ್ರಮ ಸಂಚಾಲಕರಾಗಿ ಬಾಬು ಶೆಟ್ಟಿ ನಾರಾವಿ, ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಸಂಪಾದಕರಾಗಿ ಸಾಹಿತಿ ವಿ.ಗ. ನಾಯಕ ಅವರನ್ನು ನಿಯುಕ್ತಿಗೊಳಿಸಲಾಯಿತು ಎಂದು ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.