ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕೊಲೆ, ಅತ್ಯಾಚಾರ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

Mainashree
Updated On : 12 Jul 2013, 12:05 pm

ಉಡುಪಿ: ಕೊಲೆ, ಅತ್ಯಾಚಾರ ಮತ್ತು ಇಬ್ಬರ ಕೊಲೆಗೆ ಯತ್ನಿಸಿದ ಆರೋಪಿಗೆ ಉಡುಪಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.  ಶಿಕ್ಷೆಗೊಳಗಾದ ಆರೋಪಿ ಪ್ರಭಾಕರ (35), ಈತ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಕಾಬೆಟ್ಟು ಎಂಬಲ್ಲಿನ ನಿವಾಸಿ. ಈತ 2011ರ ಅ.26ರಂದು ಸಂಜೆ 4.30 ಗಂಟೆಗೆ ಮನೆಯಲ್ಲಿ ತನ್ನ ಪತ್ನಿ ಜ್ಯೋತಿ ಎಂಬರೊಂದಿಗೆ ಜಗಳವಾಡುತ್ತಿದ್ದು, ತಡೆದ ನಾದಿನಿ ಶೈಲಜಾ ಎಂಬವರನ್ನು ಚೂರಿಯಿಂದ ಎದೆಗೆ ಇರಿದು ಕೊಲೆ ಮಾಡಿದ್ದ. ಅಲ್ಲದೇ ಇದೇ ಸಂದರ್ಭದಲ್ಲಿ ಪತ್ನಿ ಜ್ಯೋತಿ ಮತ್ತು ಸಂಬಂಧಿ ರವಿ ಎಂಬವರಿಗೂ ಚೂರಿಯಿಂದ ಇರಿದು ಕೊಲೆ ಮಾಡುವುದಕ್ಕೆ ಪ್ರಯತ್ನಿಸಿದ್ದ. ಅಲ್ಲದೇ ಈ ಆರೋಪಿ ಸೆ. 21ರಂದು ನಾದಿನಿಯ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ, ಆಕೆಯ ಮೇಲೆ ಮೇಲೆ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಪ್ರತ್ಯಕ್ಷ ಸಾಕ್ಷಿ, ಪೂರಕ ಸಾಕ್ಷಿ ಮತ್ತು ವೈದ್ಯಕೀಯ ಸಾಕ್ಷ್ಯಾಧಾರಗಳಿಂದ ಅರೋಪ ಸಾಬೀತಾಗಿದೆ. ಅದರಂತೆ ಜು. 10ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಎಂ. ಅಂಗಡಿ ಅವರು ಆರೋಪಿ ಪ್ರಭಾಕರನಿಗೆ ಕೊಲೆ ಮಾಡಿದ್ದಕ್ಕೆ ಜೀವಾವಧಿ ಶಿಕ್ಷೆ, 2 ಸಾವಿರ ದಂಡ, ಕೊಲೆ ಯತ್ನಕ್ಕೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 2 ಸಾವಿರ, ಅತ್ಯಾಚಾರಕ್ಕೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ರು. 5 ಸಾವಿರ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಟಿ.ಎಸ್. ಜಿತೂರಿ ವಾದಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement