ಉತ್ತರಾಖಂಡ್ ಸಂತ್ರಸ್ತರಿಗೆ ಧನಸಹಾಯ
ಉಡುಪಿ: ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ತತ್ತರಿಸಿದ ಉತ್ತರಾಖಂಡ್ ನೆರೆ ಸಂತ್ರಸ್ತರಿಗೆ ಅದಮಾರು ಮಠ ಅಧೀನದ ಶಿಕ್ಷಣ ಸಂಸ್ಥೆಗಳು ಧನಸಹಾಯ ಮಾಡಿವೆ.
ಉಡುಪಿ ಶ್ರೀಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು 11,50,000 ಮೊತ್ತ ಪೇಜಾವರ ಮಠಾಧೀಶ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ಸ್ಥಾಪಿಸಿದ ಜನ ಕಲ್ಯಾಣ ನಿಧಿಗೆ ಶನಿವಾರ ಹಸ್ತಾಂತರಿಸಿದರು.