ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ವಿಶೇಷ ಮಕ್ಕಳ ತರಬೇತಿ ಶಾಲೆ ಅವಗಣನೆ: ರೆಮೆಡಿಯಾ ವಿಷಾದ

Lingaraj Badiger
Updated On : 19 Jul 2013, 12:28 pm

ಕಾಪು:  ವಿಶೇಷ ಮಕ್ಕಳು ಸಮಾಜದ ಒಂದು ಭಾಗವಾಗಿದ್ದರೂ ಈವರೆಗಿನ ಎಲ್ಲಾ ಸರ್ಕಾರಗಳು ವಿಶೇಷ ಮಕ್ಕಳ ತರಬೇತಿ ಶಾಲೆಗಳಿಗೆ ಯಾವುದೇ ಸವಲತ್ತು ನೀಡದೆ ಅವರನ್ನು ಮರೆತಿವೆ ಎಂದು ಪಾಂಬೂರು ಮಾನಸ ವಿಶೇಷ ಮಕ್ಕಳ ಶಿಕ್ಷಣ ತರಬೇತಿ ಹಾಗೂ ಪುನರ್ವಸತಿ ಕೇಂದ್ರದ ಸಂಚಾಲಕಿ ರೆಮೆಡಿಯಾ ಡಿ'ಸೋಜಾ ವಿಷಾದಿಸಿದ್ದಾರೆ.
ಕಾಪು ಜೆಸಿಐ ವತಿಯಿಂದ ಶಿರ್ವ ಸಮೀಪದ ಪಾಂಬೂರು ಮಾನಸ ವಿಶೇಷ ಮಕ್ಕಳ ಶಿಕ್ಷಣ ತರಬೇತಿ ಹಾಗೂ ಪುನರ್ವಸತಿ ಕೇಂದ್ರದಲ್ಲಿ ಇತ್ತೀಚೆಗೆ ಜರುಗಿದ 'ಮಾನಸದಲ್ಲೊಂದು ದಿನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರು. 1.50 ಕೋಟಿ ಖರ್ಚು: ಈ ತರಬೇತಿ ಶಾಲೆಯಲ್ಲಿ ಮಕ್ಕಳ ಆರೈಕೆ ಮಾತ್ರವಲ್ಲದೆ, ಸ್ವ ಉದ್ಯೋಗ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಶಾಲೆಗೆ ವರ್ಷಕ್ಕೆ ರು. 1.50 ಕೋಟಿ ಖರ್ಚಿದೆ. ಇದನ್ನೆಲ್ಲಾ ಸಮಾಜದ ವ್ಯಕ್ತಿಗಳಿಂದ ಬೇಡಿ ನಡೆಸಲಾಗುತ್ತದೆ ಎಂದು ತಿಳಿಸಿದರು.
ಜೇಸಿಐ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ ಉದ್ಘಾಟಿಸಿದರು.
ಕಾಪು ಜೇಸಿಐ ಘಟಕದ ಅಧ್ಯಕ್ಷ ರಾಕೇಶ್ ಕುಂಜೂರು ಅಧ್ಯಕ್ಷತೆ ವಹಿಸಿದ್ದರು. ವಲಯ ಉಪಾಧ್ಯಕ್ಷ ರತ್ನಾಕರ ಇಂದ್ರಾಳಿ, ಜೇಸಿರೇಟ್ ಅಧ್ಯಕ್ಷೆ ಸೌಮ್ಯ ರಾಕೇಶ್, ಕಾರ್ಯದರ್ಶಿ ರಮೇಶ್ ನಾಯ್ಕ್, ಉದ್ಯಮಿ ಸುರೇಶ್ ಶೆಟ್ಟಿ, ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್ ಕುಮಾರ್ ಶೆಟ್ಟಿ ಪಾದೂರು, ಜೇಸಿ ವಲಯ ಪೂರ್ವಾಧ್ಯಕ್ಷ ಹರಿಶ್ಚಂದ್ರ ಅಮೀನ್, ಕುತ್ಯಾರು ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಜೇಸಿ ಪಮಲ್ ಕುಮಾರ್ ಇದ್ದರು. ವಿದ್ಯಾರ್ಥಿಗಳಿಗೆ ನಾನಾ ರೀತಿಯ ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು.
--
ವನಮಹೋತ್ಸವ ಆಚರಣೆ
ಉಡುಪಿ: ಅಮೂಲ್ಯ ಸಸಿಗಳನ್ನು ಕೊಂಡೊಯ್ದರೆ ಸಾಲದು, ಅವುಗಳನ್ನು ಚೆನ್ನಾಗಿ ಪೋಷಿಸಿ ಬೆಳೆಸಬೇಕು. ಸಾರ್ವಜನಿಕರಲ್ಲಿ ಸಸ್ಯ, ಪರಿಸರದ ಪ್ರಜ್ಞೆ ಬೆಳಯಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಇಂದ್ರಾಳಿ ಕುಶಲ ಶೆಟ್ಟಿ ಹೇಳಿದ್ದಾರೆ.  ಇಲ್ಲಿನ ಕುಂಜಿಬೆಟ್ಟು ಯುವಕಮಂಡಲ ವತಿಯಿಂದ ಯು. ಕಮಲಾ ಬಾಯ್ ಪ್ರೌಢಶಾಲೆಯ ಎನ್‌ಸಿಸಿ ಘಟಕ ಆಶ್ರಯದೊಂದಿಗೆ ನಡೆದ ವನಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.     ಯುವಕ ಮಂಡಲದ ಸಂಘಟನಾ ಕಾರ್ಯದರ್ಶಿ ಹಾಗೂ ಉಡುಪಿ ನಗರಸಭಾ ಸದಸ್ಯ ಶಶಿರಾಜ್ ಕುಂದರ್, ಯುವಕ ಮಂಡಲ ನೂತನ ಅಧ್ಯಕ್ಷ ಭಾಸ್ಕರ ಸೇರಿಗಾರ, ಸಂಚಾಲಕ ರಾಮ ದೇವಾಡಿಗ, ಗೌರವಾಧ್ಯಕ್ಷ ಪಿ.ಎ. ಹರೀಶ್ ಇದ್ದರು. ಎನ್‌ಸಿಸಿ ಅಧಿಕಾರಿ ಶಂಕರ ಕೆ.ಸಿ. ನಿರೂಪಿಸಿದರು. ಯುವಕ ಮಂಡಲದ ಉಪಾಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಸಂಯೋಜಿಸಿದರು. ಮುಖ್ಯ ಶಿಕ್ಷಕ ಗುಣಕರ ಶೆಟ್ಟಿ ಸ್ವಾಗತಿಸಿದರು. ಅಧ್ಯಾಪಕ ಎನ್.ಎಂ. ಪೂಜಾರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement