ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಇಂದು ಯಕ್ಷಗಾನ ತರಬೇತಿಗೆ ಚಾಲನೆ

Lingaraj Badiger
Updated On : 20 Jul 2013, 12:16 pm

ಹಂಗಾರಕಟ್ಟೆ: ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾ ಕೇಂದ್ರದ ವತಿಯಿಂದ ಪ್ರಸಕ್ತ ಸಾಲಿನ ಯಕ್ಷಗಾನ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಶನಿವಾರ ಸಂಜೆ 6 ಗಂಟೆಗೆ ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಕಲಾಕೇಂದ್ರದ ಕಲಾಭವನದಲ್ಲಿ ನಡೆಯಲಿದೆ. ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ದೋಮ ಚಂದ್ರಶೇಖರ್ ಉದ್ಘಾಟಿಸಲಿದ್ದು, ಉಡುಪಿ ಕೋ- ಆಪರೇಟಿವ್ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಬಿ.ವಿ. ಲಕ್ಷ್ಮೀನಾರಾಯಣ ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಖ್ಯಾತ ಕಲಾವಿದರ ಕೂಡುವಿಕೆಯಿಂದ 'ಚಂದ್ರಾವಳಿ ವಿಲಾಸ' ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ತಿಳಿಸಿದ್ದಾರೆ.
ಕಬ್ಬಿಣಾಂಶ ಮಾತ್ರ ವಿತರಣೆ
ಉಡುಪಿ: ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಸಹಭಾಗಿತ್ವದಲ್ಲಿ ಕಬ್ಬಿಣಾಂಶ ಮಾತ್ರೆಗಳ ವಿತರಣೆ ಕಾರ್ಯಕ್ರಮಕ್ಕೆ ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ. ರಾಮರಾಯ ಪಾಟ್ಕರ್ ಇತ್ತೀಚೆಗೆ ಚಾಲನೆ ನೀಡಿದರು. ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ನಾಗಯ್ಯ ಹಿರೇಮಠ್ ಮಕ್ಕಳ ಸ್ವಚ್ಚತೆ, ವೈಯುಕ್ತಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕ ಎನ್. ರಾಧಾಕೃಷ್ಣ ಪ್ರಭು ಕಾರ್ಯಕ್ರಮ ನಿರೂಪಿಸಿದರು.
ರು. 5 ನಾಣ್ಯದಲ್ಲಿ ವೈಷ್ಣವಿ ದೇವಿಯ ಚಿತ್ರ
ಕಾರ್ಕಳ: ಪಟ್ಟಣದ ಸ್ಟೂಡೆಂಟ್ಸ್ ಕಾರ್ನರ್‌ನಲ್ಲಿ ಭಾರತ ಸರ್ಕಾರದ ರು. 5 ಮೌಲ್ಯದ ವೈಷ್ಣವಿ ದೇವಿಯ ಚಿತ್ರವಿರುವ ಕೆಲವು ನಾಣ್ಯಗಳು ಲಭ್ಯವಿದ್ದು, ಗ್ರಾಹಕರು ರು. 5 ನಾಣ್ಯ ಕೊಟ್ಟು ಆದನ್ನು ಪಡೆದುಕೊಳ್ಳಬಹುದು ಎಂದು ಸ್ಟುಡೆಂಟ್ಸ್ ಕಾರ್ನರ್ ಮಾಲೀಕ ಬಿ. ರಾಜಾರಾಮ ಶೆಣೈ ತಿಳಿಸಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement