ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕೋಟಿ ಚೆನ್ನಯ ಅವಳಿ ವೀರರ ಗುರುಕುಲ, ನಾನರ ಗರಡಿ ಅಭಿವೃದ್ಧಿಯಾಗಲಿ: ಕೃಷ್ಣ ಶೆಟ್ಟಿ

Vishwanath S
Updated On : 21 Jul 2013, 11:46 am

ಹೆಬ್ರಿ: ತುಳುನಾಡಿನ ಅವಳಿವೀರರ ಜನ್ಮಸ್ಥಳ ಪಡುಮಲೆಯಷ್ಟೇ ಪವಿತ್ರವಾದ ಅವರು ಯುದ್ಧವಿದ್ಯೆ, ಸಾಧಕ ವಿದ್ಯೆ, ಕತ್ತಿಗುರಾಣಿ, ಬಿಲ್ವಿದ್ಯೆ ಕಲಾ ಪ್ರವೀಣತೆಕಲಿತ ಕದನ ಕಲಾಕೇಂದ್ರ ಕಟಪಾಡಿಯ ಪಾಂಗಾಳದ ನಾನರ ಗರೋಡಿಯ ಅಭಿವೃದ್ಧಿ ಕೂಡ ನಡೆಯಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈಲೂರು ಗರಡಿಯ ಆಡಳಿತ ಮೊಕ್ತೇಸರ ನೀರೆ ಕೃಷ್ಣ ಶೆಟ್ಟಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
'ಪಡ್ಡಾಯಿ ಪಕ್ಕೆಡ್ ಉಂಡು ಕಟ್ಟಾಡಿ ನಾನರೆ ಗರಡಿ' ಎಂದು ಮಾವ ಸಾಯನ ಬೈದ ಪೆರುಮಾಳ ಬಲ್ಲಾಳರಿಗೆ ಹೇಳಿ ಅವಳಿ ವೀರರನ್ನು 16 ವರ್ಷ ಪ್ರಾಯದಲ್ಲಿ ತಂದು ವಿದ್ಯಾಬ್ಯಾಸಕ್ಕೆ ಸೇರಿಸಿದ ನಂತರ ಯೌವ್ವನಭರಿತರಾಗಿ ವಿದ್ಯಾಬ್ಯಾಸ ಶಸ್ತ್ರವಿದ್ಯೆ ಕಲಿತು ಸಮಾಜದಲ್ಲಿನ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಹೋರಾಟ ಮಾಡಬೇಕೆಂಬ ಮನೋಬಲವನ್ನು ಹೊಂದಿ ಮುನ್ನಡೆದ ಪವಿತ್ರ ಸ್ಥಳವೇ ನಾನರ ಗರಡಿಯಾಗಿದೆ ಎಂದು ಅವಳಿವೀರರ ಆತ್ಮಚರಿತ್ರೆಯ ಪಾಡ್ದನ ಹೇಳುತ್ತದೆ ಎಂದು ವಿವರಿಸಿದ್ದಾರೆ.
ಅವಳಿ ವೀರರ ಗುರುಗಳಾದ ಬಲಿಪ ನಾನರ ಮತ್ತು ಪಿಲಿಪ ನಾನರರ ಆಶೀರ್ವಾದ ಪಡೆದು ಆ ಕಾಲದ ತುಂಡು ಅರಸರಾದ ಕಾಪು ಮಾಗಣೆ ಅರಸು, ಕಟಪಾಡಿ ಬೀಡು ಅರಸು, ಎರ್ಮಾಳು ಅರಸು, ಸೂಡ, ಪಡ್ಡಮ್ಮ,ಬೊಮ್ಮರಬೆಟ್ಟು ಸೆಟ್ಟಿ ಬಾಲೆಯವರನ್ನು ಅಂಜಾರು ಬೀಡಿನವರಲ್ಲಿಗೆ ಹೋಗಿ ತಮ್ಮ ಸಂಘಟನೆ, ಉದ್ದೇಶ, ಸಾಧನೆಗಳನ್ನು ವಿವರಿಸಿದ ವೀರರು ಎಲ್ಲಾ ಜಾತಿಧರ್ಮಗಳ, ಮಾನವ ಕುಲದ ಪ್ರೇಮಿಗಳಾಗಿದ್ದು ಸತ್ಯ ನ್ಯಾಯ ಧರ್ಮದ ಗೆಲವಿನ ಹೋರಾಟಕ್ಕೆ ಸಿದ್ಧವಾಗಿ ಸಜ್ಜುಗೊಂಡ ಗಂಡುನೆಲ ಮೂಲ ಪ್ರದೇಶವೇ ಉಡುಪಿ ಜಿಲ್ಲೆಯ ಭಾಗ ಎಂದು ತಿಳಿಯುತ್ತದೆ ಎಂದು ಕೃಷ್ಣ ಶೆಟ್ಟಿ ಹೇಳುತ್ತಾರೆ.
66 ಮೂಲ ಗರಡಿ, 33 ತಾವು ಗರಡಿ ಹೆಚ್ಚಿನವು ಉಡುಪಿ ಜಿಲ್ಲೆಯಲ್ಲಿದ್ದು ಒಟ್ಟು 230 ಗರಡಿಗಳಲ್ಲಿ ಕಾರ್ಕಳ ತಾಲೂಕಿನಲ್ಲಿ 82, ಉಡುಪಿ ತಾಲೂಕಿನಲ್ಲಿ 71 ಮತ್ತು ಕುಂದಾಪುರ ತಾಲೂಕಿನಲ್ಲಿ 21 ಸೇರಿ ಜಿಲ್ಲೆಯಲ್ಲಿ 174 ಗರಡಿಗಳಿವೆ.
ಹಾಗಾಗಿ ನಾನರ ಗರಡಿಯಲ್ಲಿ ಅವಳಿವೀರರಾದ ಕೋಟಿ ಚೆನ್ನಯರು ಶಸ್ತ್ರವಿದ್ಯೆ ಕಲಿಯುತ್ತಿರುವಾಗ ಮಾಡಿದ ಮಹಾನ್ ಸಾಧನೆಗಾಗಿ ಸರ್ಕಾರ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಧಾರ್ಮಿಕ ಇಲಾಖೆ ವಿಶೇಷ ಆಕರ್ಷಕವಾಗಿ ಗುರುಕುಲ ಮತ್ತು ನಾನರ ಗರಡಿ ಅಭಿವೃದ್ಧಿ ಪಡಿಸಬೇಕಾಗಿ ರಾಜ್ಯದ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆಯವರಿಗೆ ಕೃಷ್ಣ ಶೆಟ್ಟಿ ಮನವಿ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement