ಸೇವೆಗೆ ತ್ಯಾಗ ಮನೋಭಾವವೇ ಮೂಲಾಧಾರ: ಶ್ರೀಶಾ ಆಚಾರ್
ಉಡುಪಿ: ಸೇವೆಗೆ ತ್ಯಾಗ ಮನೋಭಾವವೇ ಮೂಲಾಧಾರ. ಶಾಲೆ ಅಥವಾ ಸಮುದಾಯದಲ್ಲಿ ಸಣ್ಣ ಪುಟ್ಟ ಕೊರತೆಗಳನ್ನು ನೀಗಿಸುವ ಸೇವಾ ಯೋಜನೆಗಳನ್ನು ಕೈಗೊಂಡು, ಸೇವಾ ಮನೋಭಾವವನ್ನು ಎಳೆ ವಯಸ್ಸಿನಲ್ಲಿ ಮೈಗೂಡಿಸುವುದು ಅತಿ ಮುಖ್ಯ ಎಂದು ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಶಾ ಆಚಾರ್ ಹೇಳಿದ್ದಾರೆ.
ಇಲ್ಲಿನ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಅಂಬಲಪಾಡಿ ರೋಟರಿ ಕ್ಲಬ್ ವತಿಯಿಂದ ನಡೆದ ಪದಗ್ರಹಣ ಮತ್ತು ಉಚಿತ ಸಮವಸ್ತ್ರ ವಿತರಣೆ ಸಮಾರಂಭದಲ್ಲಿ ಬಡ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ರವಿರಾಜ್ ಕಿದಿಯೂರು, 2013- 14ನೇ ಸಾಲಿನ ಇಂಟರ್ಯಾಕ್ಟ್ ಕ್ಲಬ್ನ ನೂತನ ಅಧ್ಯಕ್ಷ ಜಿ. ಪವನ್ ಮತ್ತು ಕಾರ್ಯದರ್ಶಿ ವಿದ್ಯಾಶ್ರೀ ಅವರಿಗೆ ಪದಗ್ರಹಣ ನೆರವೇರಿಸಿದರು.
ರೋಟರಿ ಸದಸ್ಯರಾದ ಪ್ರಕಾಶ್ ಶೆಟ್ಟಿ, ಕಿಶೋರ್ ಕುಮಾರ್, ಶಾಲೆ ಮುಖ್ಯೋಪಾಧ್ಯಾಯಿನಿ ನಾಗರತ್ನ, 2012-13ನೇ ಸಾಲಿನ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆ ಸ್ವಾತಿ ಮತ್ತು ಕಾರ್ಯದರ್ಶಿ ಗೌತಮ್ ಹಾಗೂ ನೂತನ ಪದಾಧಿಕಾರಿಗಳಾದ ಕಾವೇರಿ, ಕವನ, ಪ್ರಭು, ಸುಬ್ರಮಣ್ಯ ಕೆ., ರಚನ್, ಮಿಕಾಯಲ್, ಸೌರವ್, ಶ್ವೇತಾ, ಶೈಲಜಾ ಇದ್ದರು.
ಇಂಟರ್ಯಾಕ್ಟ್ ಕ್ಲಬ್ ಕೋ - ಆರ್ಡಿನೇಟರ್ ಮತ್ತು ಚಿತ್ರಕಲಾ ಶಿಕ್ಷಕ ಪ್ರಶಾಂತ್ ನಿರ್ವಹಿಸಿದರು.