ಉ.ಕರ್ನಾಟಕದಲ್ಲಿ ಪೇಜಾವರ, ಪಲಿಮಾರು ಸ್ವಾಮೀಜಿಗಳ ಚಾತುರ್ಮಾಸ್ಯ
ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಈ ಬಾರಿ ತಮ್ಮ ಚಾತುರ್ಮಾಸ್ಯ ವ್ರತವನ್ನು ಉತ್ತರ ಕರ್ನಾಟಕದಲ್ಲಿ ಕೈಗೊಳ್ಳಲಿದ್ದಾರೆ.
ಪೇಜಾವರ ಶ್ರೀಗಳು ಬಿಜಾಪುರ ನಗರದ ಶ್ರೀಕಷ್ಣ ವಾದಿರಾಜ ಮಂದಿರದಲ್ಲಿ ಜು. 31ರಿಂದ ಸೆ. 18ರ ವರೆಗೆ ಚಾರ್ತುಮಾಸ್ಯ ನಡೆಸಲಿದ್ದಾರೆ.
ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ರಾಯಚೂರಿನ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ಆ.1ರಿಂದ ಸೆ. 19ರವರೆಗೆ ಚಾತುರ್ಮಾಸ್ಯ ಕೈಗೊಳ್ಳುತ್ತಾರೆ. ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಚೆನ್ನೈನಲ್ಲಿ, ಭಾವಿ ಪರ್ಯಾಯ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ಹೈದರಾಬಾದಿನಲ್ಲಿ ಚಾತುರ್ಮಾಸ ವ್ರತ ಕೈಗೊಳ್ಳುತ್ತಾರೆ.
ಈ ಅವಧಿಯಲ್ಲಿ ಶ್ರೀಕಷ್ಣ ಜನ್ಮಾಷ್ಟಮಿ, ಕೃಷ್ಣ ಲೀಲೋತ್ಸವ, ಗಣೇಶ ಚತುರ್ಥಿ ಮುಂತಾದ ಹಬ್ಬಗಳನ್ನು ಅಲ್ಲಿಯೇ ಆಚರಿಸಲಾಗುತ್ತದೆ. ವ್ರತನಿರತ ಶ್ರೀಗಳಿಂದ ಶ್ರೀರಾಮಾಯಣ- ಮಹಾಭರತ ಹಾಗೂ ಭಾಗವತ ಗ್ರಂಥಗಳ ಪ್ರಚನ ನಡೆಯಲಿದೆ.