ಕೊಡವೂರು: ನೇತ್ರ ಉಚಿತ ತಪಾಸಣೆ ಶಿಬಿರ
ಮಲ್ಪೆ: ನರ ದೌರ್ಬಲ್ಯ, ಮಧುಮೇಹ, ವಯಸ್ಸಿನ ಕಾರಣಗಳಿಂದ ಕಣ್ಣಿನ ತೊಂದರೆ ಸಂಭವಿಸಬಹುದು. ಆದುದರಿಂದ ನಾವು ಕಣ್ಣಿನ ರಕ್ಷಣೆಗೆ ಹೆಚ್ಚು ಪ್ರಾಮುಖ್ಯ ನೀಡಬೇಕು ಎಂದು ಖ್ಯಾತ ನೇತ್ರ ಸರ್ಜನ್ ಡಾ. ನಿತ್ಯಾನಂದ ನಾಯಕ್ ಹೇಳಿದ್ದಾರೆ.
ಇಲ್ಲಿನ ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಭಾನುವಾರ ನಡೆದ ನೇತ್ರ ಉಚಿತ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ನೇತ್ರ ತಪಾಸಣೆ ಶಿಬಿರದಲ್ಲಿ ನೇತ್ರತಜ್ಞ ಡಾ. ಶಂಶೀರ್, ಜೇಸಿಐ ಉಡುಪಿ ಸಿಟಿಯ ನಿಯೋಜಿತ ಅಧ್ಯಕ್ಷ ಶಕೀರ್ ಎಂ. ಹಾವಂಜೆ, ಕೊಡವೂರು ಶ್ರೀ ಶಂಕರನಾರಾಯಣ ದೇವಳದ ಆಡಳಿತ ಮೊಕ್ತೇಸರ ಟಿ. ರಾಘವೇಂದ್ರ ರಾವ್, ಕೊಡವೂರು ಹಳೆ ವಿದ್ಯಾರ್ಥಿ ಸಂಘ ಮತ್ತು ಯುವಕ ಸಂಘದ ಅಧ್ಯಕ್ಷ ರತ್ನಾಕರ್ ಅಮೀನ್ ಇದ್ದರು.
ರಾಘವೇಂದ್ರ ಕರ್ವಾಲ್ ನಿರೂಪಿಸಿದರು. ರೋಟರಿ ಮಲ್ಪೆ ಕೊಡವೂರಿನ ಅಧ್ಯಕ್ಷೆ ಪೂರ್ಣಿಮಾ ಜನಾರ್ದನ್ ವಂದಿಸಿದರು.