ಗುರು ಪೂರ್ಣಿಮೆ ದಿನಾಚರಣೆ
ಉಡುಪಿ: ಇಲ್ಲಿನ ಶಿರ್ವ ಕುತ್ಯಾರು ಪರಶುರಾಮ ಕ್ಷೇತ್ರದಲ್ಲಿ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ವತಿಯಿಂದ ಪ್ರಾರಂಭವಾದ ಮೋಂಟ್ಸ್ ಸೊರಿ ಇಂಟರ್ ನ್ಯಾಶನಲ್ ರೆಸಿಡೆನ್ಸಿಯಲ್ ಸ್ಕೂಲ್ನಲ್ಲಿ ಗುರು ಪೂರ್ಣಿಮಾ ದಿನ ಮಾತಾಪಿತಾ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಯಿತು. ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ನರ್ಸಿಂಗ್ ಹೋಂ ಅಧ್ಯಕ್ಷ ಡಾ.ಎಂ.ಎ.ಆರ್. ಕುಡ್ವ, ಶಿರ್ವ ಮಾಣಿಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಮೋಹನದಾಸ ಹೆಗ್ಡೆ, ಮುಂಡ್ಕೂರು ಉದ್ಯಮಿ ಉಮೇಶ ಕಾಮತ್ ಇದ್ದರು. ಸಂಸ್ಥೆಯ ಅಧ್ಯಕ್ಷ ಶಂಭುದಾಸ್ ಗುರೂಜಿ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಸೌಮ್ಯ ಶೆಟ್ಟಿ ವಂದಿಸಿದರು.