ಯಕ್ಷಗಾನ ತರಗತಿ ಉದ್ಘಾಟನೆ
ಉಡುಪಿ: ಯಕ್ಷಗಾನ ಕನ್ನಡ ಕರಾವಳಿಯ ಗಂಡು ಕಲೆಯಾಗಿದ್ದು, ನಮ್ಮ ಸಂಸ್ಕೃತಿಯ ಬಿಂಬಕವಾಗಿದೆ. ಯಕ್ಷಗಾನ ಕಲಿಯುವುದರಿಂದ ವಿದ್ಯಾರ್ಥಿಗಳಲ್ಲಿ ಅಭಿವ್ಯಕ್ತಿ ಸಾಮರ್ಥ್ಯದ ವೃದ್ಧಿಯಾಗುತ್ತದೆ ಎಂದು ನಿವೃತ್ತ ಉಪನ್ಯಾಸಕ ಪಿ. ದಯಾನಂದ ಕಾಮತ್ ಹೇಳಿದ್ದಾರೆ.
ಶಿರ್ವ ಸಮೀಪದ ಬೆಳ್ಳೆ ಚರ್ಚ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವ ವರ್ಷಾಚರಣೆ ಪ್ರಯುಕ್ತ ಯಕ್ಷಗಾನ ತರಗತಿ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವ.ರೆ.ಫಾ. ಜೋಸ್ವಿ ಫೆರ್ನಾಂಡಿಸ್ ಮಾತನಾಡಿ, ಶಿಕ್ಷಣವೆಂದರೆ ಬರಿಯ ಪಠ್ಯ ಪುಸ್ತಕದ ಓದಲ್ಲ. ಸಾಹಿತ್ಯ ಮತ್ತು ಕಲೆಗಳನ್ನೊಳಗೊಂಡ ಸುಂದರ ಪ್ರಕ್ರಿಯೆ ಎಂದರು.
ಯಕ್ಷಗಾನ ಗುರುಗಳಾದ ಕೆ.ಜೆ. ಕೃಷ್ಣ, ಸತೀಶ ಉಪಾಧ್ಯಾಯ, ಸಂಘಟಕರಾದ ವಿಠಲ್ ನಾಯಕ್, ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಜೆಸಿಂತಾ t’ ಸೋಜ, ಸಂತ ಲಾರೆನ್ಸ್ ಕಾಲೇಜಿನ ಪ್ರಾಂಶುಪಾಲೆ ಸರಿತಾ t’ÑæàÞd ಇದ್ದರು.
ಮುಖ್ಯೋಪಾಧ್ಯಾಯ ಸಿಲ್ವೆಸ್ಟರ್ ಮಥಾಯಸ್ ಸ್ವಾಗತಿಸಿದರು.