ಉಡುಪಿ: ಮಳೆಗೆ ಹಟ್ಟಿ ಕುಸಿದು 2 ದನ ಸಾವು
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸೋಮವಾರ ಸಾಧರಣ ಮಳೆಯಾಗಿದೆ. ಬೆಳಗ್ಗೆ ಸ್ವಲ್ಪ ಹೊತ್ತು ಮಳೆ ಸುರಿದದ್ದು, ಬಿಟ್ಟರೆ ನಂತರ ಉತ್ತಮ ಬಿಸಿಲಿನ ವಾತವರಣವಿತ್ತು.
ಬೆಳಗ್ಗೆ ಸುರಿದ ಮಳೆಯಿಂದಾಗಿ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ವಸಂತಿ ಶೆಟ್ಟಿ ಅವರ ಹಟ್ಟಿ ಕುಸಿದು 2 ದನಗಳು ಮೃತಪಟ್ಟಿವೆ.
ಮಳೆ ವಿವರ: ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ವರೆಗೂ 24 ಗಂಟೆಗಳಲ್ಲಿ 41.53 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 27.0 ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 38.2 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 59.4 ಮಿ.ಮೀ. ಮಳೆಯಾಗಿದೆ.