ಎನ್. ಭವಾನಿಶಂಕರ್ ಕೃತಿ ಬಿಡುಗಡೆ
ಉಡುಪಿ: ಶಿರ್ವ ಸೈಂಟ್ ಮೇರಿಸ್ ಕಾಲೇಜಿನ ಕನ್ನಡ ವಿಭಾಗದ ಸಾಹಿತ್ಯ ಸಂಘದ ಆಶ್ರಯದಲ್ಲಿ, ಪ್ರಾಧ್ಯಾಪಕ ಎನ್. ಭವಾನಿಶಂಕರ್ ಬರೆದಿರುವ 'ವೆಬ್ಸೈಟ್ಗಳಿಂದ ಜ್ಞಾನ ಪಡೆಯುವುದು ಹೇಗೆ' ಮತ್ತು 'ನೆಟ್ ವರ್ಕಿಂಗ್' ಎಂಬ ಕೃತಿಗಳನ್ನು ಪ್ರಾಧ್ಯಾಪಕಿ ಪ್ರೊ. ಪ್ರೀಮಾ ಡಿ' ಸೋಜ ಇತ್ತೀಚೆಗೆ ಕಾಲೇಜಿನಲ್ಲಿ ಬಿಡುಗಡೆ ಮಾಡಿದರು. ಪ್ರಾಧ್ಯಾಪಕ ಪ್ರೊ. ಸುಬ್ರಹ್ಮಣ್ಯ, ಡಾ. ಪದ್ಮನಾಭ ಭಟ್ ಭಾಗವಹಿಸಿದ್ದರು. ಸ್ವಾತಿ ಸ್ವಾಗತಿಸಿದರು. ಪ್ರೊ. ವಿಠಲ್ ನಾಯಕ್ ವಂದಿಸಿದರು.
ವಾಣಿಜ್ಯ, ಅರ್ಥಶಾಸ್ತ್ರ ಸಂಘ ಉದ್ಘಾಟನೆ
ಉಡುಪಿ: ಇಲ್ಲಿಗೆ ಸಮೀಪದ ತೆಂಕನಿಡಿಯೂರು ಸ.ಪ್ರ.ದ. ಕಾಲೇಜಿನ ವಾಣಿಜ್ಯ ಶಾಸ್ತ್ರ ಮತ್ತು ಅರ್ಥ ಶಾಸ್ತ್ರ ಸಂಘಗಳನ್ನು ಇತ್ತೀಚೆಗೆ ಉಡುಪಿ ಹಿರಿಯ ಲೆಕ್ಕಪರಿಶೋಧಕ ಗುಜ್ಜಾಡಿ ಪ್ರಭಾಕರ ನಾಯಕ್ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಜಿ. ಯೋಗಾನಂದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವ್ಯವಹಾರ ಅಧ್ಯಯನ ವಿಭಾಗ ಮುಖ್ಯಸ್ಥ ಪ್ರೊ.ಬಾಲಕೃಷ್ಣ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಮಹೇಶ್ ರಾವ್, ಸಹಾಯಕ ಪ್ರಾಧ್ಯಾಪಕ ಪ್ರೊ. ಟಿ.ಜಿ. ಭಟ್, ಅರ್ಥಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಪ್ರೊ. ವಿನಿತಾ ತಂತ್ರಿ ಹಾಗೂ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಉಮೇಶ್ ಪೈ ಇದ್ದರು. ಪ್ರಥಮ ಬಿ.ಕಾಂ. ವಿದ್ಯಾರ್ಥಿ ರವಿಕಾಂತ ಸ್ವಾಗತಿಸಿದರು. ಮನೀಶಾ ನಿರ್ವಹಿಸಿದರು. ನಿಶಾನ್ ವಂದಿಸಿದರು.
ರೇಖಿ ಚಿಕಿತ್ಸಾ ಶಿಬಿರ
ಉಡುಪಿ: ಶೃಂಗೇರಿಯ ಡಿವೈನ್ ಹೀಲಿಂಗ್ ಫೌಂಡೇಶನ್ ವತಿಯಿಂದ ಇಲ್ಲಿನ ಅಂಬಲಪಾಡಿಯ ಜಿಲ್ಲಾ ಸವಿತಾ ಸಮಾಜ ಸಮುದಾಯ ಭವನದಲ್ಲಿ ರೇಖಿ ಚಿಕಿತ್ಸಾ ಶಿಬಿರ ಭಾನುವಾರ ನೆರವೇರಿತು. ಶಿವಮೊಗ್ಗದ ಖ್ಯಾತ ಆಯುರ್ವೇದ ವೈದ್ಯರು ಹಾಗೂ ಅದ್ಭುತ ಪರಿಣಾಮಕಾರಿ ರೇಖಿ ಮತ್ತು ಆಧ್ಯಾತ್ಮಿಕ ಚಿಕಿತ್ಸೆ ಲೇಖಕ ಡಾ. ಸತ್ಯನಾರಾಯಣ ರೇಖಿ ದೀಕ್ಷೆ ಪ್ರಾಯೋಗಿಕ ತರಬೇತಿ, ರೇಖಿ ಚಿಕಿತ್ಸೆ ಕುರಿತು ವಿವರಣೆ ನೀಡಿದರು. ಸುಮಾರು 150ಕ್ಕೂ ಹೆಚ್ಚಿನ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.