ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಹಿರಿಯ ಪತ್ರಕರ್ತರ ಜೀವನಗಾಥೆ ಪುಸ್ತಕ ಹೊರತನ್ನಿ: ಬೈಕಂಪಾಡಿ

Vishwanath S
Updated On : 2 Jun 2013, 12:14 pm

ಮಂಗಳೂರು: ಹಿರಿಯ ಪತ್ರಕರ್ತರ ಕುರಿತು ಜೀವನಗಾಥೆ ಸಮಗ್ರ ವಿವರವುಳ್ಳ ಪುಸ್ತಕ ಹೊರತರಬೇಕು. ಇದರಿಂದ ಈಗಿನ ಪತ್ರಕರ್ತರಿಗೆ ಪರಿಪೂರ್ಣ ಮಾಹಿತಿ ಸಿಗಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಹೇಳಿದ್ದಾರೆ.
 ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಪತ್ರಕರ್ತ ಮಹಮ್ಮದ್ ಆರಿಫ್ ಪಡುಬಿದ್ರಿಗೆ ಪ.ಗೋ. ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದರು.
 ಪದ್ಯಾಣ ಗೋಪಾಲಕೃಷ್ಣರ ಜತೆಗಿನ ಒಡನಾಟವನ್ನು ಮೆಲುಕು ಹಾಕಿದ ಅವರು, ನರಸಿಂಹ ರಾವ್, ಉಪಾಧ್ಯಾಯ, ಉಭಯ, ಹೊಸಮನಿ ಮತ್ತಿತರರು ಪತ್ರಿಕೋದ್ಯಮದಲ್ಲಿ ಹೊಸ ಮೇಲ್ಪಂಕ್ತಿ ಹಾಕಿದವರು. ವಸ್ತುನಿಷ್ಠ ವರದಿ ಮೂಲಕ ಪತ್ರಕರ್ತರ ಘನತೆ ಎತ್ತಿ ಹಿಡಿದಿದ್ದಾರೆ. ಸರಿ ಉತ್ತರ ಸಿಗುವವರೆಗೆ ಸುದ್ದಿಗೋಷ್ಠಿ ನಡೆಸಿದವರನ್ನು ಬಿಡುತ್ತಿರಲಿಲ್ಲ. ಅವರ ಆದರ್ಶಗಳು ಇಂದಿನ ಪತ್ರಕರ್ತರಿಗೆ ದಾರಿದೀಪವಾಗಬೇಕು ಎಂದು ಆಶಿಸಿದರು.  ಈ ಸಂದರ್ಭ ವಿಜಯಕರ್ನಾಟಕದಲ್ಲಿ ಪ್ರಕಟವಾದ 'ನ್ಯಾಪ್‌ಕಿನ್ ಯಶೋದಗಾಥೆ' ವಿಶೇಷ ವರದಿಗೆ ಮಹಮ್ಮದ್ ಆರಿಫ್‌ಗೆ ಈ ಪ್ರಶಸ್ತಿ ನೀಡಲಾಯಿತು. ಈ ಪ್ರಶಸ್ತಿ ರು. 5 ಸಾವಿರ ನಗದು, ಮಾನಪತ್ರವನ್ನು ಒಳಗೊಂಡಿದೆ.  ಸಂಘದ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಪ.ಗೋ. ಧರ್ಮಪತ್ನಿ ಸಾವಿತ್ರಿ ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ರಾಮಕೃಷ್ಣ ಆರ್, ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಆಯ್ಕೆ ಸಮಿತಿ ಅಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement