ಪುನಾರುಕೆರೆ ಶಾಲೆ ಪ್ರಾರಂಭೋತ್ಸವ
ಉಡುಪಿ: ಶಿರ್ವ ಸಮೀಪದ ಪುನಾರುಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವವು ಬೆಳ್ಮಣ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್ ಕುಂದರ್ ಸೂಡ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು.
ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕಾರ್ಕಳ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ನ ಬೆಳ್ಮಣ್ ಶಾಖೆಯ ವತಿಯಿಂದ ಸ್ಕೂಲ್ ಬ್ಯಾಗ್, ಪುನಾರು ಶ್ರೀ ಭಜನಾ ಮಂಡಳಿ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ರು. 10,000 ಮೌಲ್ಯದ ನೋಟ್ ಪುಸ್ತಕಗಳು ಮತ್ತು ಇಲಾಖೆಯ ವತಿಯಿಂದ ನೀಡಿದ ಪಠ್ಯ ಪುಸ್ತಕಗಳನ್ನು ವಿತರಿಸುವ ಮೂಲಕ 2013- 14ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷವನ್ನು ಸ್ವಾಗತಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳ್ಮಣ್ ವೃತ್ತ ಶಿಕ್ಷಣ ಸಂಯೋಜಕಿ ಶೈಲಜಾ ಹೆಗ್ಡೆ, ಬ್ಯಾಂಕ್ನ ಅಧ್ಯಕ್ಷ ಹರಿಶ್ಚಂದ್ರ ತೆಂಡುಲ್ಕರ್ ಮಾಳ, ಉಪಾಧ್ಯಕ್ಷ ಸುರೇಂದ್ರ ನಾಯಕ್ ಕುಕ್ಕುಂದೂರು, ಪ್ರಧಾನ ವ್ಯವಸ್ಥಾಪಕ ಸುರೇಂದ್ರ ನಾಯಕ್, ಬೆಳ್ಮಣ್ ಶಾಖೆಯ ಸಲಹಾ ಸಮಿತಿ ನಿರ್ದೇಶಕ ದೇವಣ್ಣ ಪ್ರಭು, ವಿಶ್ವನಾಥ ಪಾಟ್ಕರ್, ಬ್ಯಾಂಕಿನ ನಿರ್ದೇಶಕ ಕಡಾರಿ ರವೀಂದ್ರ ಪ್ರಭು, ಶ್ರೀ ಶಾಸ್ತಾವು ಭಜನಾ ಮಂಡಳಿ ಅಧ್ಯಕ್ಷ ಶಂಕರ ಆಚಾರ್ಯ ಭಾಗವಹಿಸಿ, ಶುಭ ಹಾರೈಸಿದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕ ದೇವದಾಸ ಪಾಟ್ಕರ್ ಸ್ವಾಗತಿಸಿ, ವಂದಿಸಿದರು.