ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಪೊಲೀಸ್ ಹಿರಿಯ ಸಿಬ್ಬಂದಿ ಕೆ. ಬಾಲಕೃಷ್ಣಗೆ ಬೀಳ್ಕೊಡುಗೆ

Mainashree
Updated On : 4 Jun 2013, 10:58 am

ಉಡುಪಿ: ಜಿಲ್ಲಾ ಪೊಲೀಸ್ ಕಚೇರಿಯ ಕಂಟ್ರೋಲ್ ರೂಂ ವಿಭಾಗದಲ್ಲಿ 5 ವರ್ಷಗಳಿಂದ ಸಹಾಯಕ ಉಪನಿರೀಕ್ಷಕರಾಗಿ ಹಾಗೂ ರಾಜ್ಯದ ಹಲವು ಪೊಲೀಸ್ ವಯರ್ಲೆಸ್ ವಿಭಾಗದಲ್ಲಿ 33 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ, ವಯೋನಿವೃತ್ತಿ ಹೊಂದಿದ ಕೆ. ಬಾಲಕೃಷ್ಣ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಸಭಾಂಗಣದಲ್ಲಿ ಬೀಳ್ಕೊಡಲಾಯಿತು.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಡಾ. ಪ್ರಭುದೇವ್ ಮಾನೆ ಅಧ್ಯಕ್ಷತೆ ವಹಿಸಿ ಬಾಲಕೃಷ್ಣ ಅವರನ್ನು ಸನ್ಮಾನಿಸಿ, ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಎಸ್. ಚಂದ್ರಶೇಖರ್ ಶೆಟ್ಟಿ, ಜಿಲ್ಲಾ ಪೊಲೀಸ್ ವಿಶೇಷ ವಿಭಾಗದ ನಿರೀಕ್ಷಕ ಆಲಿ ಎ. ಶೇಕ್ ಭಾಗವಹಿಸಿದ್ದರು.
ಪೊಲೀಸ್ ಕಂಟ್ರೋಲ್ ರೂಂ ಪ್ರಭಾರ ನಿರೀಕ್ಷಕ ಹರೀಶ್ ಎಚ್. ಪೈ ಹಾಗೂ ನಿವೃತ್ತರ ಪತ್ನಿ ಪ್ರೇಮಾ ಇದ್ದರು.
ಜಿಲ್ಲಾ ತಕ್ಷೀರು ಅಭಿಲೇಖಾ ಸಂಗ್ರಾಹಾಲಯದ ಹೆಡ್ಕಾನ್ಸ್ಟೇಬಲ್ ಉದಯ ಕುಮಾರ್ ಪ್ರಾರ್ಥಿಸಿದರು. ಕಂಟ್ರೋಲ್ ರೂಂ ಉಪನಿರೀಕ್ಷಕ ಮಾಧವ ಪೂಜಾರಿ ಸ್ವಾಗತಿಸಿದರು. ಸಹಾಯಕ ಉಪನಿರೀಕ್ಷಕ ಬಿ. ಮನಮೋಹನ್ ನಿರೂಪಿಸಿ ವಂದಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement