ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಬ್ರಹ್ಮಾವರ: ರೋಟರಿ ಕುಟುಂಬ ಸೌಹಾರ್ದ ಸಮ್ಮಿಲನ ಸಂಪನ್ನ

Mainashree
Updated On : 4 Jun 2013, 10:58 am

ಬ್ರಹ್ಮಾವರ: ಸಮರ್ಪಣಾಭಾವ ಮತ್ತು ಆಸಕ್ತಿ ಇರುವ ವ್ಯಕ್ತಿ ಜೀವನದಲ್ಲಿ ಎಂದಿಗೂ ಸೋಲನ್ನು ಕಾಣಲಾರ. ವಿಶ್ವ ಭ್ರಾತೃತ್ವ ಮತ್ತು ಸೇವಾವಕಾಶದೊಂದಿಗೆ ಕುಟುಂಬದ ವಾತಾವರಣವಿರುವ ಏಕೈಕ ಸೇವಾ ಸಂಸ್ಥೆ ರೋಟರಿ ಎಂದು ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ಬಿ. ಪುಂಡಲೀಕ ಮರಾಠೆ ಹೇಳಿದರು.
ಅವರು ಬ್ರಹ್ಮಾವರ ರೋಟರಿ ಸಭಾಭವನದಲ್ಲಿ ಜರುಗಿದ 'ರೋಟರಿ ಕುಟುಂಬ ಸೌಹಾರ್ದ ಸಮ್ಮಿಲನ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕಲುಷಿತ ಮನಸ್ಸುಗಳನ್ನು ಪುಳಕಿತಗೊಳಿಸುವ ಹಾಗೂ ಪ್ರತಿಷ್ಠೆಗಿಂತ ಸಂಬಂಧಗಳಿಗೆ ಬೆಲೆ ಕೊಡುವ ವಿಶೇಷ ಗುಣದ ಜೊತೆಗೆ ಸೇವೆಯಿಂದ ಸಮಾಜದ ಋಣ ಮುಕ್ತರಾಗಲು ರೋಟರಿ ಉತ್ತಮ ವೇದಿಕೆಯಾಗಿದೆ ಎಂದರು.
ಪ್ರಾಮಾಣಿಕ ಕುಟುಂಬದ ನಿರ್ಮಾಣದಲ್ಲಿ ತಾಯಿತಂದೆಯರ ಪಾತ್ರ ಮಹತ್ವದ್ದಾಗಿದೆ. ಸಂಸ್ಕಾರವಂತ ಮಕ್ಕಳು ದೇಶದ ಆಸ್ತಿ, ಮಕ್ಕಳಿಗೆ ಪೋಷಕರು ಸಂಪತ್ತನ್ನು ಕ್ರೋಢಿಕರಿಸುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸುವತ್ತ ಗಮನ ನೀಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಬ್ರಹ್ಮಾವರ ರೋಟರಿ ಅಧ್ಯಕ್ಷ ಸುಂದರಾಮ್ ಶೆಟ್ಟಿ ವಹಿಸಿ, ಸ್ವಾಗತಿಸಿದರು. ಉಡುಪಿ ವಿಜಯಾ ಬ್ಯಾಂಕಿನ ಪ್ರಾದೇಶಿಕ ಶಾಖಾ ಪ್ರಬಂಧಕ ಎಸ್. ಪಾಂಡುರಂಗ ಕಾಮತ್ ಅದೃಷ್ಟ ವ್ಯಕ್ತಿ ಆಯ್ಕೆ ನಡೆಸಿಕೊಟ್ಟರು. ಡಾ. ಕೃಷ್ಣ ಅವರು ಸೌಹಾರ್ದ ಆಟಗಳನ್ನು ನಿರ್ದೇಶಿಸಿದರು. ಹಿರಿಯ ರೊಟೇರಿಯನ್ ಭಾಸ್ಕರ್ ರೈ ನಗೆಬುಗ್ಗೆಗಳ ಮೂಲಕ ಮನರಂಜನೆ ನೀಡಿದರು.
ಸಮಾರಂಭದಲ್ಲಿ ರೋಟರಿ ಜಿಲ್ಲಾ ಮಾಜಿ ಗವರ್ನರ್ ಜ್ಞಾನವಸಂತ ಶೆಟ್ಟಿ, ರೆ.ಫಾ. ಡೇವಿಡ್ ಕ್ರಾಸ್ತ, ಹಿರಿಯ ರೊಟೇರಿಯನ್ ಬಿ.ಎಂ. ಭಟ್, ಬಿ.ಎಸ್. ಭಟ್, ಶ್ರೀನಿವಾಸ ಹೆಗ್ಡೆ ಮೊದಲಾದವರು ಇದ್ದರು. ಕಾರ್ಯದರ್ಶಿ ನಂದಕಿಶೋರ್ ವರದಿ ಓದಿದರು. ಜಗದೀಶ ಶೆಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement