ಗಂಗೊಳ್ಳಿ ಶಾಲಾ ಪ್ರಾರಂಭೋತ್ಸವ
ಗಂಗೊಳ್ಳಿ: ಇಲ್ಲಿನ ರಥಬೀದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2013-14ನೇ ಶೈಕ್ಷಣಿಕ ವರ್ಷದ ಶಾಲೆ ಪ್ರಾರಂಭೋತ್ಸವ ಸಮಾರಂಭ ಇತ್ತೀಚಿಗೆ ನಡೆಯಿತು. ಶಾಲೆಯ ಮುಖ್ಯ ಶಿಕ್ಷಕಿ ಉಷಾ ದಿನಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಬಾಬು ಖಾವರ್ ಪಠ್ಯಪುಸ್ತಕವನ್ನು ಮಕ್ಕಳಿಗೆ ವಿತರಿಸಿದರು. ಅದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಉಷಾದಿನಕರ ತಮ್ಮ ತಂದೆ-ತಾಯಿ ದಿ.ಶಾಂತಾನಂದ, ದಿ. ಸುಶೀಲಾ ಶಾಂತಾನಂದ ಮತ್ತು ತಮ್ಮ ದಿ. ಚಂದ್ರು ಇವರ ಸ್ಮರಣಾರ್ಥ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಅರ್ಥಕೋಶವನ್ನು ವಿತರಿಸಿದರು. ಸಹಶಿಕ್ಷಕಿ ಚಂದ್ರಕಲಾ ಸ್ವಾಗತಿಸಿದರು. ಸಹಶಿಕ್ಷಕಿ ಪ್ರೇಮಲತಾ ವಂದಿಸಿದರು.