ಪುಸ್ತಕ ವಿತರಣೆ, ಅಭಿನಂದನೆ
ಉಡುಪಿ: ಕೊಡವೂರು ವಲಯ ಬ್ರಾಹ್ಮಣ ಸಮಿತಿ ವತಿಯಿಂದ ಅರ್ಹ ಬಡ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಕರ್ನಾಟಕ ವಿಕಾಸ ಬ್ಯಾಂಕಿನ ಅಂಬಾಗಿಲು ಶಾಖೆಯ ವ್ಯವಸ್ಥಾಪಕ ಕೆರೆಮಠ ಭಾಸ್ಕರ್ ಭಟ್ ಮತ್ತು ಕೊಡವೂರು ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ. ನಾರಾಯಣ ಬಲ್ಲಾಳ್ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ವಿತರಿಸಿದರು.
ಇದೇ ಸಂದರ್ಭ, ಇತ್ತೀಚೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 94ರಷ್ಟು ಅಂಕ ಗಳಿಸಿ ಉತ್ತೀರ್ಣರಾದ ಪೂಜಾ ಜನಾರ್ದನ್ ಅವರನ್ನು ಅಭಿನಂದಿಸಲಾಯಿತು.
ಬ್ರಾಹ್ಮಣ ಸಮಿತಿ ಅಧ್ಯಕ್ಷ ಕೆರೆಮಠ ವಾಮನ ಭಟ್, ಉಪಾಧ್ಯಕ್ಷ ಶ್ರೀಶ ಭಟ್ ಕೊಡವೂರು ಇದ್ದರು. ಪ್ರೇಮಾ ಬಾಯರಿ ಹಾಗೂ ಭಾರತಿ ಸುಬ್ರಹ್ಮಣ್ಯ ಪ್ರಾರ್ಥಿಸಿದರು. ಕಾರ್ಯದರ್ಶಿ ಭಾಸ್ಕರ್ ಭಟ್ ಸ್ವಾಗತಿಸಿದರು. ಕೋಶಾಧಿಕಾರಿ ಎಂ. ಉಮೇಶ್ ರಾವ್ ಆಯವ್ಯಯ ಲೆಕ್ಕಪತ್ರ ಮಂಡಿಸಿದರು. ಜತೆ ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ವಂದಿಸಿದರು.