ಪುಸ್ತಕ, ಸಮವಸ್ತ್ರ ವಿತರಣೆ
ಬ್ರಹ್ಮಾವರ: ಇಲ್ಲಿನ ಸೈಂಟ್ ಪೀಟರ್ಸ್ ಎಸೋಶಿಯೇಶನ್ ಬಾರ್ಕೂರು- ಮುಂಬೈ ವತಿಯಿಂದ ಬಾರ್ಕೂರಿನ ಮೇರಿನೊಲ್ ಹಿರಿಯ ಪ್ರಾಥಮಿಕ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು.
ಪುಸ್ತಕ, ಸಮವಸ್ತ್ರಗಳನ್ನು ವಿತರಿಸಿದ ಉಡುಪಿ ತಾಪಂ ಅಧ್ಯಕ್ಷೆ ಗೌರಿ ಪೂಜಾರಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎಂದಿಗೂ ತಾವು ಕಲಿತ ಶಾಲೆಯನ್ನು ಮರೆಯಬಾರದು. ಉತ್ತಮ ವಿದ್ಯಾಭ್ಯಾಸ ಪಡೆದು ಕಲಿತ ಶಾಲೆಗೂ ಹಾಗೂ ಹೆತ್ತವರಿಗೂ ಕೀರ್ತಿ ತರಬೇಕು ಎಂದು ಹಾರೈಸಿದರು.
ಶಾಲಾ ಸಂಚಾಲಕ ವಲೇರಿಯನ್ ಮೆಂಡೊನ್ಸಾ ಅಧ್ಯಕ್ಷತೆ ವಹಿಸಿದ್ದರು. ಸೈಂಟ್ ಪೀಟರ್ಸ್ ಎಸೋಶಿಯೇಶನ್ ಅಧ್ಯಕ್ಷ ಪೀಟರ್ ಪುರ್ಟಾಡೊ, ಉಪಾಧ್ಯಕ್ಷರಾದ ಹೆನ್ರಿ ರೋಚ್, ವಲೇರಿಯನ್ ಫೆರ್ನಾಂಡಿಸ್, ಶಾಲಾ ಮುಖ್ಯೋಪಾಧ್ಯಾಯಿನಿ ಸರೋಜಿನಿ ಕೆ. ಇನ್ನಿತರರು ಇದ್ದರು.