ಅಂಗನವಾಡಿ ಸಹಾಯಕಿ ವಿರುದ್ಧ ದೂರು ದಾಖಲು
ಕಾರ್ಕಳ: ಅಂಗನವಾಡಿ ಮಗುವಿನ ಕೈಗೆ ಬರೆ ಎಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಠಾಣೆಯಲ್ಲಿ ಅಂಗನವಾಡಿ ಅಡುಗೆ ಸಹಾಯಕಿ ವಿರುದ್ಧ ಗುರುವಾರ ಪ್ರಕರಣ ದಾಖಲಾಗಿದೆ. ಕುಕ್ಕುಂದೂರು ಗ್ರಾಮದ ಹಾಜಡ್ಡು ಅಂಗನವಾಡಿಯ ಅಡುಗೆ ಸಹಾಯಕಿ ಭಾಗ್ಯ ಎಂಬಾಕೆ ಮೂರು ವರ್ಷದ ಮಗು ಹರ್ಷಿತ್‌ನ ಮುಖ ಹಾಗೂ ಕೈಗೆ ಬರೆ ಎಳೆದಿದ್ದಾರೆ ಎಂದು ಕುಕ್ಕುಂದೂರು ಅಯ್ಯಪ್ಪನಗರ ನಿವಾಸಿ ರಾಧಾ ನೀಡಿದ ದುರಿನಲ್ಲಿ ಆರೋಪಿಸಲಾಗಿದೆ. ಬುಧವಾರ ಹರ್ಷಿತ್ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.