ವಿಟ್ಲ: ಬಸ್ ಚಲಿಸಿ ಚರಂಡಿ ಸ್ಲ್ಯಾಬ್ ಹಾನಿ
ವಿಟ್ಲ: ಚರಂಡಿಗೆ ಅಳವಡಿಸಿದ ಸ್ಲ್ಯಾಬ್ ಮೇಲೆ ಕೆಎಸ್ಆರ್ಟಿಸಿ ಬಸ್ ಚಲಿಸಿದ ಪರಿಣಾಮ ಸ್ಲ್ಯಾಬ್ ಸಂಪೂರ್ಣ ತುಂಡಾದ ಘಟನೆ ವಿಟ್ಲ-ಪುತ್ತೂರು ರಸ್ತೆಯಲ್ಲಿ ನಡೆದಿದ್ದು, ಪಾದಚಾರಿಗಳು ನಡೆದಾಡಲು ಪರದಾಡುವಂತಾಗಿದೆ. ವಿಟ್ಲ-ಪುತ್ತೂರು ರಸ್ತೆಯ ವಿ.ಎಚ್.ಕಾಂಪ್ಲೆಕ್ಸ್ ಬಳಿಯಿರುವ ರಸ್ತೆ ಬದಿಗಳಲ್ಲಿ ಚರಂಡಿಗೆಂದು ಸ್ಲ್ಯಾಬ್ಗಳನ್ನು ಅಳಡಿಸಲಾಗಿತ್ತು. ಪುತ್ತೂರು ಕಡೆಯಿಂದ ಬಂದಂತಹ ಕೆಎಸ್ಆರ್ಟಿಸಿ ಬಸ್ ಇನ್ನೊಂದು ವಾಹನಕ್ಕೆ ದಾರಿ ನೀಡುವ ಭರದಲ್ಲಿ ಸ್ಲ್ಯಾಬ್ ಮೇಲಿಂದ ಚಲಿಸಿದ ಪರಿಣಾಮ ಸ್ಲ್ಯಾಬ್ ತುಂಡಾಗಿ ಚೆಲ್ಲಾಪಿಲ್ಲಿಯಾಗಿದೆ ಬಿದ್ದಿದೆ. ಎರಡು ದಿನಗಳ ಹಿಂದೆಯೇ ಘಟನೆ ಸಂಭವಿಸಿದ್ದು, ಪಾದಚಾರಿಗಳು ನಡೆದಾಡಲು ಆತಂಕಪಡುವಂತಾಗಿದೆ.