ಸುದ್ದಿ ಸಂಕ್ಷೇಪ
ಯಡಾಡಿ ಮತ್ಯಾಡಿ: ಶಾಲಾ ಪ್ರಾರಂಭೋತ್ಸವ
ಕುಂದಾಪುರ: ಕುಂದಾಪುರ ವಲಯದ ಯಡಾಡಿ-ಮತ್ಯಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಇತ್ತೀಚಿಗೆ ನಡೆಯಿತು. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಜನಪ್ರತಿನಿಧಿಗಳು, ಪೋಷಕರು ವಿದ್ಯಾರ್ಥಿಗಳನ್ನು ಸ್ವಾಗತಿಸಿಕೊಂಡರು. ಬಳಿಕ ಪಂಚಾಯಿತಿ ಸದಸ್ಯರಾದ ಬಿ. ಅರುಣ ಕುಮಾರ್ ಹೆಗ್ಡೆ ಮೂಲಕ, ಸರ್ಕಾರದಿಂದ ನೀಡಿದ ಉಚಿತ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಮುಖ್ಯೋಪಾಧ್ಯಾಯಿನಿ ಇಂದಿರಾ ಸ್ವ್ವಾಗತಿಸಿದರು. ರಮಣಿ ವಂದಿಸಿದರು. ದೈಹಿಕ ಶಿಕ್ಷಕ ದಿನಕರ ಶೆಟ್ಟಿ ನಿರೂಪಿಸಿದರು.
ಫಲಿಮಾರು: ವಿಶ್ವ ಪರಿಸರ ದಿನಾಚರಣೆ
ಫಲಿಮಾರು: ಭಾರತ್ ನಿರ್ಮಾಣ್ ಸ್ವಯಂಸೇವಕರು ಹಾಗೂ ಫಲಿಮಾರು ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ವಿಶ್ವಪರಿಸರ ದಿನಾಚರಣೆ ನಡೆಸಲಾಯಿತು. ಈ ಪ್ರಯುಕ್ತ ಫಲಿಮಾರು ಗ್ರಾಮದಾದ್ಯಂತ ಬೃಹತ್ ಜಾಥಾ ನಡೆಸಲಾಯಿತು. ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಡುವ ಹಾಗೂ ಸಸಿ ವಿತರಿಸುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪಡುಬಿದ್ರಿ ಠಾಣಾಧಿಕಾರಿ ಮಹದೇವ ಶೆಟ್ಟಿ, ಇತ್ತೀಚಿನ ದಿನಗಳಲ್ಲಿ ಕೈಗಾರಿಕೆಗಳ ಪ್ರಭಾವದಿಂದ ಪರಿಸರಗಳ ಮಾಲಿನ್ಯವಾಗುತ್ತಿಗೆ ಎಂದರು. ಗ್ರಾ.ಪಂ. ಅಧ್ಯಕ್ಷೆ ಮಾಲತಿ ದಿವಾಕರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಸದಸ್ಯೆ ಅಮಿತಾ ಪೂಜಾರಿ, ಮಾಜಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಉಪಾಧ್ಯಕ್ಷ ಗಿರಿಯಪ್ಪ ಪೂಜಾರಿ, ಮಾಜಿ ಉಪಾಧ್ಯಕ್ಷ ಜಿತೇಂದ್ರ ಪುರ್ಟಾಡೋ, ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅನ್ಬರಸ್, ಸ್ಥಳೀಯ ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಆಶಾ, ಹಿರಿಯ ಪ್ರಾಥಮಿಕ ಶಾಲೆಯ ನಾರಾಯಣ್, ಸತೀಶ್, ಜಯರಾಮ ಶೆಟ್ಟಿ, ಗೋಪಾಲ ಪೂಜಾರಿ, ಗ್ರಾಮ ಪಂಚಾಯಿತಿ ಪಿಡಿಒ ವಿಲಾಸಿನಿ, ಭಾರತ್ ನಿರ್ಮಾಣ್ ಸಂಯೋಜಕರು ಜಯಂತಿ, ಸ್ವಯಂ ಸೇವಕರ ಪ್ರತಿನಿಧಿಯಾದ ಗಾಯಾತ್ರಿ ಪ್ರಭು, ದಿನೇಶ್ ಕೋಟ್ಯಾನ್, ಆಶಾ, ಫಲಿಮಾರು ಯಶವಂತ ಪೂಜಾರಿ, ತರಬೇತುದಾರ ಸುಧಾಕರ್ ಇದ್ದರು.